ಮೈಸೂರು : ‘ನಟನ’ ರಂಗಶಾಲೆಯು ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಹಯೋಗದೊಂದಿಗೆ ಪ್ರಸ್ತುತ ಪಡಿಸುವ ‘ಸುಬ್ಬಣ್ಣ ಸ್ಮರಣೆ 2024’ ಕಾರ್ಯಕ್ರಮವನ್ನು ದಿನಾಂಕ 06-07-2024ರಿಂದ ಪ್ರತಿ ದಿನ ಸಂಜೆ 6-30 ಗಂಟೆಗೆ ಮೈಸೂರಿನ ರಾಮಕೃಷ್ಣ ನಗರದ ‘ನಟನ ರಂಗಶಾಲೆ’ಯಲ್ಲಿ ಆಯೋಜಿಸಲಾಗಿದೆ.
ದಿನಾಂಕ 06-07-2024ರಂದು ಡಾ. ಶ್ರೀಪಾದ ಭಟ್ ಇವರ ರಂಗಪಠ್ಯ ಮತ್ತು ನಿರ್ದೇಶನದಲ್ಲಿ ‘ಕನ್ನಡ ಕಾವ್ಯ ಕಣಜ’ ಹಾಗೂ ಮೈಸೂರಿನ ವಿನೋಬಾ ರಸ್ತೆಯ ಹೊಟೇಲ್ ಸದರ್ನ್ ಸ್ಟಾರ್ ಇಲ್ಲಿ ಸಂಜೆ 4-30 ಗಂಟೆಗೆ ಮೈಸೂರು ಸಾಹಿತ್ಯ ಸಂಭ್ರಮ 2024 ನಡೆಯಲಿದೆ.
ದಿನಾಂಕ 07-07-2024ರಂದು ಡಾ. ಶ್ರೀಪಾದ ಭಟ್ ಇವರ ರಂಗಪಠ್ಯ ಮತ್ತು ನಿರ್ದೇಶನದಲ್ಲಿ ‘ಕನ್ನಡ ಕಾವ್ಯ ಕಣಜ’ ಪ್ರಸ್ತುತಗೊಳ್ಳಲಿದೆ.
ದಿನಾಂಕ 13-07-2024ರಂದು ಮಂಜುನಾಥ ಎಲ್. ಬಡಿಗೇರ ಇವರ ನಿರ್ದೇಶನದಲ್ಲಿ ಎಸ್.ಕೆ. ಇವೆಂಟ್ ಸಹಯೋಗದಲ್ಲಿ ದೊಡ್ಡಬ್ಯಾಡರಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳು ‘ಕರ್ಣ ಅರ್ಜುನರ ಕಾಳಗ’ ಮೂಡಲಪಾಯ ಯಕ್ಷಗಾನ ಪ್ರಸಂಗದ ಪ್ರದರ್ಶನ ನೀಡಲಿದ್ದಾರೆ.
ದಿನಾಂಕ 14-07-2024ರಂದು ನಟನ ರಂಗಮಂದಿರ ಲೋಕಾರ್ಪಣೆಯಾಗಿ ಒಂಭತ್ತು ವರ್ಷ ಮತ್ತು ಮಂಡ್ಯ ರಮೇಶರ 60ನೇ ಜನ್ಮದಿನ ಪ್ರಯುಕ್ತ 2023-24ನೇ ಸಾಲಿನ ರಂಗಭೂಮಿ ಡಿಪ್ಲೋಮೊ ವಿದ್ಯಾರ್ಥಿಗಳ ಘಟಿಕೋತ್ಸವದಲ್ಲಿ ‘ಸ್ಥಾವರವೂ ಜಂಗಮ’ ಪ್ರದರ್ಶನಗೊಳ್ಳಲಿದೆ.
ದಿನಾಂಕ 16-07-2024ರಂದು ‘ಕೆ.ವಿ. ಸುಬ್ಬಣ್ಣ ಅವರ ಬದುಕು ಮತ್ತು ಬರಹ’ ಎಂಬ ವಿಷಯದ ಬಗ್ಗೆ ನಿವೃತ್ತ ಹಿರಿಯ ಅಧಿಕಾರಿ ಖ್ಯಾತ ಲೇಖಕಿ ಶ್ರೀಮತಿ ಮೀನಾ ಮೈಸೂರು ಇವರು ಉಪನ್ಯಾಸ ನೀಡಲಿದ್ದಾರೆ.
ದಿನಾಂಕ 21-07-2024ರಂದು ಡಾ. ಶ್ರೀಪಾದ ಭಟ್ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಕಣಿವೆಯ ಹಾಡು’ ಹಾಗೂ ದಿನಾಂಕ 28-07-2024ರಂದು ಮೇಘ ಸಮೀರ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಪ್ರಮೀಳಾರ್ಜುನೀಯಂ’ ಪ್ರಸ್ತುತಗೊಳ್ಳಲಿದೆ.