ಬೆಂಗಳೂರು : ಕಾಜಾಣ ಅರ್ಪಿಸುವ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಜೀವನಾಧಾರಿತ ಡಾ. ಬೇಲೂರು ರಘುನಂದನ್ ಇವರ ರಂಗಪಠ್ಯ, ವಿನ್ಯಾಸ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಸಾಲು ಮರಗಳ ತಾಯಿ ತಿಮ್ಮಕ್ಕ’ ನಾಟಕ ಪ್ರದರ್ಶನವು ದಿನಾಂಕ 08-07-2024ರಂದು ಸಂಜೆ 6-00 ಗಂಟಗೆ ಬೆಂಗಳೂರಿನ ಮಲ್ಲತ್ತಹಳ್ಳಿ, ನಾಗರಭಾವಿ, 2ನೇ ಸ್ಟೇಜ್, ಎನ್.ಜಿ.ಇ.ಎಫ್. ಲೇಔಟ್ ಇಲ್ಲಿರುವ ಕಲಾಗ್ರಾಮದಲ್ಲಿ ನಡೆಯಲಿದೆ.
ವೃಕ್ಷಮಾತೆ, ನಾಡೋಜ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಇವರ ಗೌರವ ಉಪಸ್ಥಿತಿಯಲ್ಲಿ ಸಮಾಜ ಸೇವಕರಾದ ಶ್ರೀಮತಿ ಕನ್ನಿಕಾಪರಮೇಶ್ವರಿ ಮತ್ತು ಡಾ. ಜಿ. ಪರಮೇಶ್ವರ್ ಇವರು ನಾಟಕಕ್ಕೆ ಚಾಲನೆ ನೀಡಲಿದ್ದಾರೆ. ಭಾರತೀಯ ರಾಷ್ಟ್ರೀಯ ಸೇವಾ ಸಮಿತಿ ಇದರ ಅಧ್ಯಕ್ಷರಾದ ಶ್ರೀ ಎಂ. ರಾಮಚಂದ್ರ (ಹೂಡಿ ತಿಮ್ಮಿ), ವೀರಲೋಕ ಪ್ರಕಾಶನದ ಶ್ರೀ ವೀರಕಪುತ್ರ ಶ್ರೀನಿವಾಸ್, ಸಾಲುಮರದ ತಿಮ್ಮಕ್ಕನವರ್ ದತ್ತು ಪುತ್ರ ಶ್ರೀ ಬಳ್ಳೂರು ಉಮೇಶ್, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಶ್ರೀ ಜೆ.ಪಿ.ಓ. ಚಂದ್ರು ಮತ್ತು ಖ್ಯಾತ ಜಾನಪದ ಗಾಯಕಿ ಶ್ರೀಮತಿ ಸವಿತಕ್ಕ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.