ಮಂಗಳೂರು : ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ) ಸುರತ್ಕಲ್ ಇದರ ವತಿಯಿಂದ ‘ಕರ್ನಾಟಕ ಸಂಗೀತ ಸ್ಪರ್ಧೆ’ಯನ್ನು ಆಯೋಜಿಸಲಾಗಿದೆ.
ನಿಯಮಗಳು :
1) ವಯಸ್ಸು 15 ವರ್ಷಕ್ಕಿಂತ ಕಡಿಮೆ ಇರಬೇಕು (ದಿನಾಂಕ 17-11-2009ರ ನಂತರ ಜನಿಸಿದವರಾಗಿರಬೇಕು.)
2) ಉಡುಪಿ, ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಸಂಗೀತಾಭ್ಯಾಸಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ.
3) ಪ್ರಸ್ತುತಪಡಿಸಲಿರುವ ಕೃತಿಗಳು
a) ಒಂದು ವರ್ಣ, b) ಒಂದು ಮಧ್ಯಮ ಕಾಲ ಕೃತಿ, (ಒಂದು ದೇವರ ನಾಮ, d) ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ರಚಿತವಾದ ಕೃತಿಗಳಲ್ಲಿ ಒಂದು ಕೃತಿ (ಆಯ್ಕೆಯಾದ ಸ್ಪರ್ಧಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಕೃತಿಯನ್ನು on-line ಮೂಲಕ ಕಲಿಯುವ ವ್ಯವಸ್ಥೆ ಮಾಡಲಾಗುವುದು)
4) ಶ್ರುತಿ ಪೆಟ್ಟಿಗೆಯ ವ್ಯವಸ್ಥೆಯನ್ನು ಮಾಡಲಾಗುವುದು. ಪಕ್ಕವಾದ್ಯ ಇರುವುದಿಲ್ಲ.
5) ಮನೋಧರ್ಮ ಸಂಗೀತ ಪ್ರಸ್ತುತಿಗೆ ಅವಕಾರವಿಲ್ಲ.
6) ಸ್ಪರ್ಧಿಸುವ ಇಚ್ಛೆ ಉಳ್ಳವರು ಯಾವುದಾದರೊಂದು ಮಧ್ಯಮಕಾಲ ಕೃತಿಯನ್ನು ದಿನಾಂಕ 21-07-2024ರೊಳಗೆ ವಿಡಿಯೋ ದಾಖಲಿಸಿ [email protected]ಗೆ mail ಮೂಲಕ ಕಳುಹಿಸುವುದು.
7) ಸ್ಪರ್ಧೆಯಲ್ಲಿ ಭಾಗವಹಿಸಲು ಅಯ್ಕೆಯಾದವರ ಹೆಸರುಗಳನ್ನು ಜುಲೈ 31ರೊಳಗಾಗಿ ಪ್ರಕಟಿಸಲಾಗುವುದು.
8) ಅಂತಿಮ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಸ್ಪರ್ಧಿಗಳ ಗರಿಷ್ಠ ಸಂಖ್ಯೆ 25.
9) ಆಯ್ಕೆಯಾದವರು ನಿಗದಿತ ಅರ್ಜಿಯಲ್ಲಿ ವಿವರಗಳನ್ನು ತುಂಬಿ, ಶುಲ್ಕ ರೂ.500/-ನ್ನು ದೂರವಾಣಿ ಸಂಖ್ಯೆ 9742792669ಗೆ Google pay ಮೂಲಕ ಕಳುಹಿಸಿಕೊಡಬೇಕು.
10) ಸ್ಪರ್ಧೆಗೆ ಆಯ್ಕೆಯಾದ ಎಲ್ಲರೂ ಸ್ಪರ್ಧೆ ನಡೆಯುವ ದಿನಾಂಕ ನವಂಬರ್ 17ರಂದು ಸುರತ್ಕಲ್ ನ ‘ಅನುಪಲ್ಲದಿ’ಯಲ್ಲಿ ಬೆಳಗ್ಗೆ 9:30ರೊಳಗೆ ಹಾಜರಿರಬೇಕು ಮತ್ತು ಅಂದಿನ ಕಾರ್ಯಕ್ರಮದ ಮುಕ್ತಾಯದ ತನಕ (ಸಂಜೆ ಗಂಟೆ 8) ಉಪಸ್ಥಿತರಿರತಕ್ಕದ್ದು.
11) ಪ್ರಥಮ ಬಹುಮಾನ ರೂ 5,000/- ಎರಡನೇ ಬಹುಮಾನ ರೂ.3,000/- ಮತ್ತು ಮೂರನೇ ಬಹುಮಾನ ರೂ.2,000/-
12) ಬಹುಮಾನ ವಿಜೇತರಿಗೆ (ಪ್ರಥಮ ಬಹುಮಾನ ಒಂದು ಗಂಟೆ, ದ್ವಿತೀಯ ಬಹುಮಾನ 45 ನಿಮಿಷ ಮತ್ತು ತೃತೀಯ ಬಹುಮಾನ 30 ನಿಮಿಷ) ಮುಂದಕ್ಕೆ ಪಕ್ಕವಾದ್ಯದೊಂದಿಗೆ ಸಂಗೀತ ಕಛೇರಿ ನೀಡುವುದಕ್ಕೆ ಅವಕಾಶ ನೀಡಲಾಗುವುದು.
13) ನವೆಂಬರ್ 17ರಿಂದ 20ರ ತನಕ ನಡೆಯುವ ‘ರಾಗ ಸುಧಾರಸ ಸಂಗೀತೋತ್ಸವ’ದಲ್ಲಿ ದಿನಾಂಕ 18-10-2024ರಂದು ಬಹುಮಾನ ವಿತರಣೆ ಮಾಡಲಾಗುವುದು.
14) ತೀರ್ಪುಗಾರರ ತೀರ್ಮಾನವೇ ಅಂತಿಮ.
15) ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ 9742792669.