ಮಂಗಳೂರು : ಮಂಗಳೂರಿನ ಕೋಡಿಕಲ್ ನಲ್ಲಿರುವ ವಿಪ್ರ ವೇದಿಕೆ (ರಿ.) ಇದರ ದ್ವೈಮಾಸಿಕ ಸಭಾ ಕಾರ್ಯಕ್ರಮವು ದಿನಾಂಕ 07-07-2024ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸುರತ್ಕಲ್ಲಿನ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯ, ಶ್ರೇಷ್ಠ ಗಮಕಿ ಹಾಗೂ ಗೋವಿಂದ ದಾಸ ಕಾಲೇಜಿನಲ್ಲಿ ನಡೆಯಲಿರುವ ಗಮಕ ಸಮ್ಮೇಳನದ ಅಧ್ಯಕ್ಷರಾದ ಶ್ರೀ ಯಜ್ಞೇಶ್ ರಾವ್ ಹೊಸಬೆಟ್ಟು ಮಾತನಾಡಿ “ಗಮಕ ಕಲೆಯು ನಮ್ಮ ಭಾರತೀಯ ಕಲೆಗಳಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಹಲವು ರಂಗ ಪ್ರಕಾರಗಳಲ್ಲಿ ಗಮಕವು ಸಾಹಿತ್ಯ, ಸಂಗೀತ, ಶ್ರುತಿ, ರಾಗಗಳ ಮಿಲನದಿಂದ ಉತ್ತಮ ಆರಾಧನಾ ಕಲೆ ಎಂದು ಪ್ರಸಿದ್ಧಿ ಪಡೆದಿದೆ. ಅನೇಕ ಕವಿಗಳ ರಚನೆಯನ್ನು ಹಾಡಿದಾಗ ಆತ್ಮಾನುಭೂತಿ ಮೂಡುತ್ತದೆ.” ಎಂದರು.
ಕಾರ್ಯದರ್ಶಿ ದುರ್ಗಾದಾಸ್ ಕಟೀಲ್ ಪ್ರಸ್ತಾವಿಕವಾಗಿ ಮಾತನಾಡಿ, ಶ್ರೀಮತಿ ವಿದ್ಯಾ ರಾವ್ ಸ್ವಾಗತಿಸಿ, ಕೋಶಾಧಿಕಾರಿ ಕಿಶೋರ ಕೃಷ್ಣ ನಿರ್ವಹಿಸಿ, ಮಾಜಿ ಅಧ್ಯಕ್ಷ ಅನೂಪ್ ರಾವ್ ಬಾಗ್ಲೋಡಿ ಕಲಾವಿದರನ್ನು ಗೌರವಿಸಿದರು. ಬಳಿಕ ಯಜ್ಞೇಶ್ ರಾವ್ ಇವರಿಂದ ವಾಚನ ಹಾಗೂ ವರ್ಕಾಡಿ ರವಿ ಅಲೆವೂರಾಯರಿಂದ ‘ಅಕ್ಷಯ ಪಾತ್ರೆ’ ಎಂಬ ಭಾಗದ ಪ್ರವಚನ ಜರಗಿತು.