ಮೈಸೂರು: ಮೈಸೂರಿನ ಗಾನಭಾರತಿ ಸಾಂಸ್ಕೃತಿಕ ವೇದಿಕೆಯ ಪ್ರಾಯೋಜಿತ ಕಾರ್ಯಕ್ರಮದಲ್ಲಿ ಮಂಗಳೂರಿನ ನಾದನೃತ್ಯ ಕಲಾಸಂಸ್ಥೆಯ ನಿರ್ದೇಶಕಿ ಡಾ. ಭ್ರಮರಿ ಶಿವಪ್ರಕಾಶರಿಂದ ‘ಕುಮಾರವ್ಯಾಸ ನೃತ್ಯಭಾರತ’ ಎಂಬ ಶಾಸ್ತ್ರೀಯ ಭರತನಾಟ್ಯ ಕಾರ್ಯಕ್ರಮವು ದಿನಾಂಕ 04-07-2024 ರಂದು ಮೈಸೂರಿನ ಕುವೆಂಪು ನಗರದಲ್ಲಿರುವ ವೀಣೆ ಶೇಷಣ್ಣ ಭವನದಲ್ಲಿ ನಡೆಯಿತು.
ಗಾನಭಾರತಿಯ ಅಧ್ಯಕ್ಷೆ ನಿವೃತ್ತ ಕನ್ನಡ ಪ್ರಾಧ್ಯಾಪಕಿ, ಸಂಗೀತಜ್ಞೆ, ವಿಮರ್ಶಕಿ ಡಾ. ರಮಾ ವಿ. ಬೆಣ್ಣೂರು ಮಾತನಾಡಿ “ಕುಮಾರವ್ಯಾಸ ಹಾಡಿದ ಕೃಷ್ಣ ಕಥೆಯ ನೃತ್ಯ ಪ್ರಸ್ತುತಿಯು ಕನ್ನಡನಾಡಿನ ಕಲಾಪ್ರಪಂಚದಲ್ಲಿ ಒಂದು ಅನನ್ಯ ಪ್ರಯತ್ನ. ಕನ್ನಡ ಸಾಹಿತ್ಯ ಕೃತಿ ಆಧಾರಿತ ಪ್ರಸ್ತುತಿಯನ್ನೇ ಪ್ರೋತ್ಸಾಹಿಸಲು ಬಯಸಿ ಪ್ರಾಯೋಜಿಸಿದ ಶ್ರೀ ರವಿ ಬಳೆ ದಂಪತಿಗಳ ಸಹೃದಯತನವು ಶ್ಲಾಘನೀಯ.” ಎಂದರು.