ಪುತ್ತೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನೇತ್ರಾವತಿ ತುಳುಕೂಟ ರಾಮಕುಂಜ (ರಿ.) ಸಹಯೋಗದಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜ ಇವರ ಆಶ್ರಯದಲ್ಲಿ ಕಡಬ ತಾಲೂಕಿನ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ‘ತುಳು ಭಾಷೆ – ಸಂಸ್ಕೃತಿ ಕಾರ್ಯಾಗಾರ’ವನ್ನು ದಿನಾಂಕ 13-07-2024ರಂದು ಬೆಳಗ್ಗೆ ಗಂಟೆ 10-00ಕ್ಕೆ ಪುತ್ತೂರಿನ ರಾಮಕುಂಜದ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀ ತಾರಾನಾಥ್ ಗಟ್ಟಿಯವರ ಅಧ್ಯಕ್ಷತೆಯಲ್ಲಿ ನೇತ್ರಾವತಿ ತುಳುಕೂಟ ರಾಮಕುಂಜದ ಅಧ್ಯಕ್ಷರಾದ ಶ್ರೀ ಕೆ. ಸೇಸಪ್ಪ ರೈ ಇವರು ಉದ್ಘಾಟನೆ ಮಾಡಲಿದ್ದಾರೆ. ತುಳುಕೂಟ ಕಡಬದ ಸದಸ್ಯರಾದ ಶ್ರೀ ಉಮೇಶ್ ಶೆಟ್ಟಿ ಸಾಯಿರಾಂ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ಗೋಷ್ಠಿ 1ರಲ್ಲಿ ‘ತುಳು ಬಾಸೆದ ಸಾಹಿತ್ಯೊಲು’ ಎಂಬ ವಿಷಯದ ಬಗ್ಗೆ ತುಳು ಉಪನ್ಯಾಸಕರಾದ ಶ್ರೀಮತಿ ಪ್ರಶಾಂತಿ ಶೆಟ್ಟಿ, ಗೋಷ್ಠಿ 2ರಲ್ಲಿ ‘ತುಳುನಾಡ ಗೊಬ್ಬುಲು’ ಎಂಬ ವಿಷಯದ ಬಗ್ಗೆ ತುಳು ಸಾಹಿತಿ ಶ್ರೀ ಚಂದ್ರಹಾಸ ಕಣಂತೂರು ಮತ್ತು ಗೋಷ್ಠಿ 3ರಲ್ಲಿ ‘ ತುಳುನಾಡ್ ದ ಪರ್ಬೊಲು’ ಎಂಬ ವಿಷಯದ ಬಗ್ಗೆ ತುಳು ಎಂ.ಎ. ವಿದ್ಯಾರ್ಥಿಯಾದ ಶ್ರೀ ಪ್ರಸಾದ್ ಅಂಚನ್ ಇವರು ಉಪನ್ಯಾಸ ನೀಡಲಿದ್ದಾರೆ. ಸಂಜೆ 3-00 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.