ಬೆಂಗಳೂರು : ಜಂಗಮ ಕಲೆಕ್ಟಿವ್ ಬೆಂಗಳೂರು, ನಿರ್ದಿಗಂತ ಮತ್ತು ಪಿ.ಆರ್.ಎಫ್. ಇವರ ಸಹಯೋಗದಲ್ಲಿ ‘ಬಾಬ್ ಮಾರ್ಲಿ From Kodihalli’ ನಾಟಕ ಪ್ರದರ್ಶನವು ದಿನಾಂಕ 20-07-2024ರಂದು ರಂಗಶಂಕರದಲ್ಲಿ ನಡೆಯಲಿದೆ.
ಪಠ್ಯ ಆಕರ : ಎನ್.ಕೆ. ಹನುಮಂತಯ್ಯ, ಚಂದ್ರಶೇಕರ್ ಕೆ., ರಚನೆ, ವಿನ್ಯಾಸ, ನಿರ್ದೇಶನ : ಲಕ್ಷ್ಮಣ್ ಕೆ.ಪಿ. ಮತ್ತು ಡ್ರಮಟರ್ಗ್ : ವಿ.ಎಲ್. ನರಸಿಂಹಮೂರ್ತಿ. ಪ್ರದರ್ಶನ ಪಠ್ಯ ವಿನ್ಯಾಸ ಹಾಗೂ ನಟನೆ ಮರಿಯಮ್ಮ ಚೂಡಿ, ಚಂದ್ರ ಶೇಕರ್ ಕೆ., ಶ್ವೇತಾರಾಣಿ ಹೆಚ್. ಕೆ. ಭರತ್ ಡಿಂಗ್ರಿ ಇವರಿಂದ ಮಂಜು ನಾರಾಯಣ್ ಬೆಳಕಿನ ವಿನ್ಯಾಸ ಮಾಡಿದ್ದಾರೆ.
‘ಗುರುತು’ ಅನ್ನುವುದು ಕೆಲವರಿಗೆ ಹೆಮ್ಮೆಯಾದರೆ, ಕೆಲವರಿಗದು ಅಸಹ್ಯ, ಹಿಂಸೆ, ಜೀವನದ್ದುದ್ದಕ್ಕೂ ಹೊತ್ತು ತಿರುಗಬೇಕಾದ ಹೆಣಭಾರದ ಚಾಕರಿ. ಹಲವು ಬಾರಿ ‘ಉಳಿವಿಗಾಗಿ’ ಗುರುತುಗಳನ್ನು ಮುಚ್ಚಿಡುತ್ತಾ ಸಾಗುವುದೇ ‘ಬದುಕು’ ಅನ್ನಿಸಿಕೊಂಡು ಹರಿಯುತ್ತಾ ಹಗುರಾಗುವುದು ಸಾಗದ ದಾರಿಯಾಗಿ ಕಂಡು ದಣಿವಾಗುತ್ತದೆ. ದಣಿವಾಗುತ್ತದೆ ಎಂಬ ಕಾರಣಕ್ಕೆ ಹಾರಾಡುವ ಬಯಕೆಯನ್ನು ಬಿಡುವಂತೆಯೂ ಇರುವುದಿಲ್ಲ. ಕತ್ತಲ ದಾರಿಯಲ್ಲಿ ಮಿಂಚುಹುಳುಗಳಿಗಾಗಿ ಜೀವ ಆತುಕೊಳ್ಳಬೇಕಾಗುತ್ತದೆ. ಆಗ ಕತ್ತಲೊಂದು ಸಂಭ್ರಮ ಬೆಳಕೊಂದು ಸಂಭ್ರಮ. ಹೀಗೆ ಗುರುತಿನ ಸುತ್ತ ಇರುವ ಹಲವು ಸಂಕೀರ್ಣ ವೀರೋಧಭಾಸಗಳನ್ನು ಎದುರುಗೊಳ್ಳುವ ಕಥನಗಳ ಗೊಂಚಲು ‘ಬಾಬ್ ಮಾರ್ಲಿ ಫ್ರಮ್ ಕೋಡಿಹಳ್ಳಿ’ ಇಲ್ಲಿ ‘ಬಾಬಾ ಸಾಹೇಬ್ ಅಂಬೇಡ್ಕರ್ ಅವರ ‘Waiting for a Visa’ ಒಂದು ರೂಪಕವಾಗಿ ಕಂಡು ಅವರು ನಿಜಕ್ಕೂ ಪ್ರವೇಶ ಕೇಳುತ್ತಿರುವುದು ಎಲ್ಲಿಗೆ ? ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ.