ಮೂಡಬಿದಿರೆ: ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ವಿವೇಕವಾಣಿ ಸರಣಿ ಉಪನ್ಯಾಸ ಕಾರ್ಯಕ್ರಮದ ಮೂವತ್ತೇಳನೇ ಉಪನ್ಯಾಸ ಕಾರ್ಯಕ್ರಮವು ದಿನಾಂಕ 12-07-2024 ರಂದು ಮೂಡಬಿದಿರೆಯ ಆಳ್ವಾಸ್(ಸ್ವಾಯತ್ತ) ಕಾಲೇಜಿನಲ್ಲಿ ನಡೆಯಿತು.
“ಸಮಾಜ ಸೇವೆ: ಸ್ವಾಮಿ ವಿವೇಕಾನಂದರ ಆದರ್ಶ ಮತ್ತು ಸೋದರಿ ನಿವೇದಿತಾ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಮಂಗಳೂರಿನ ಭಾರತ್ ಅಕಾಡೆಮಿಯ ಅಕಾಡೆಮಿಕ್ ಸಂಯೋಜಕರಾದ ಸ್ವಾತಿ ರೈ “ಸೋದರಿ ನಿವೇದಿತಾ, ವಿವೇಕಾನಂದರ ಶಿಷ್ಯೆ, ಭಾರತದ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಮತ್ತು ಮಹಿಳಾ ಶಿಕ್ಷಣಕ್ಕೆ ತನ್ನ ಜೀವನವನ್ನೇ ಅರ್ಪಿಸಿದವರು. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಆಳವಾದ ಗೌರವವನ್ನು ಉತ್ತೇಜಿಸಿದರು. ಇವರ ಸೇವಾಭಾವನೆಯು ನಮ್ಮೆಲ್ಲರಿಗು ಪ್ರೇರಣೆಯಾಗಿದೆ. ಜನಸೇವೆಯನ್ನು ಸಮರ್ಥವಾಗಿ ಮಾಡುವ ಮೂಲಕ ಸಮಾಜದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಸುಧಾರಿಸಲು ಇವರ ಆದರ್ಶಗಳು ನಮಗೆ ಮಾರ್ಗದರ್ಶನ.” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮೂಡಬಿದಿರೆಯ ಆಳ್ವಾಸ್(ಸ್ವಾಯತ್ತ) ಕಾಲೇಜಿನ ಪರೀಕ್ಷಾಂಗ ಕುಲಸಚಿವರಾದ ಡಾ. ನಾರಾಯಣ ಶೆಟ್ಟಿ, ರಾಮಕೃಷ್ಣ ಮಿಷನ್ ಹಿರಿಯ ಸ್ವಯಂಸೇವಕರಾದ ಶ್ರೀ ಬೆಳ್ಳಾಲ ಗೋಪಿನಾಥ್ ರಾವ್, ಉಪನ್ಯಾಸಕರು ಮತ್ತು ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ. ಚಂದ್ರು ಹೆಗ್ಡೆ ಸ್ವಾಗತಿಸಿ, ವಿದ್ಯಾರ್ಥಿನಿ ಗಗನ ಲೋಕೇಶ್ ಕಾರ್ಯಕ್ರಮವನ್ನು ನಿರೂಪಿಸಿ, ಚಿಗುರು ವಿದ್ಯಾರ್ಥಿ ಸಂಘದ ಸಂಯೋಜಕರಾದ ಶಶಾಂಕ್ ಆರ್ ವಂದಿಸಿದರು.