ಮಂಗಳೂರು : ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ನವೀಕೃತ ಸಾಹಿತ್ಯ ಸದನದ ಉದ್ಘಾಟನಾ ಸಮಾರಂಭವು ದಿನಾಂಕ 13-07-2024ರಂದು ಮಂಗಳೂರಿನ ಉರ್ವಸ್ಟೋರ್ ಇಲ್ಲಿ ನಡೆಯಿತು.
ಕ. ಲೇ. ವಾ. ಸಂಘ, ಮಂಗಳೂರು ಇದರ ಅಧ್ಯಕ್ಷರಾದ ಡಾ. ಜ್ಯೋತಿ ಚೇಳಾಯ್ರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಸರಕಾರದ ಮಾನ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮ ಹಾಗೂ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಡಿ. ವೇದವ್ಯಾಸ ಕಾಮತ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆಯಾದ ಮಮತಾ ಗಟ್ಟಿ, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಶ್ರೀನಾಥ ಎಂ.ಪಿ, ಸುರತ್ಕಲ್ಲಿನ ಎಂ. ಆರ್. ಪಿ. ಎಲ್. ಇದರ ಅಧಿಕಾರಿಯಾದ ಮೀನಾಕ್ಷಿ ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ಗಣೇಶ್ ಕುಲಾಲ್ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ತರೀಕೆರೆ ಇಲ್ಲಿನ ಪ್ರಾಧ್ಯಾಪಕರಾದ ಡಾ. ಸಬಿತಾ ಬನ್ನಾಡಿ ಮುನ್ನೋಟದ ಮಾತುಗಳನ್ನಾಡಿದರು. ಹಿರಿಯ ಲೇಖಕರು ಮತ್ತು ಪ್ರಕಾಶಕರರಾದ , ಉಡುಪಿಯ ಶ್ರೀಮತಿ ಇಂದಿರಾ ಹಾಲಂಬಿ ಹಾಗೂ ಹಿರಿಯ ವಾಚಕರು ಮತ್ತು ಮುಖ್ಯಮಂತ್ರಿಗಳ ಮಾಜಿ ಸಂಸದೀಯ ಕಾರ್ಯದರ್ಶಿಯಾದ ಶ್ರೀಮತಿ ಶಕುಂತಲಾ ಟಿ. ಶೆಟ್ಟಿ ಗೌರವ ಉಪಸ್ಥಿತರಿದ್ದರು. ಡಾ. ಸುಧಾರಾಣಿ ಪ್ರಸ್ತಾವಿಸಿ, ಮಂಜುಳಾ ನಿರೂಪಿಸಿದರು.
ಸಭಾಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ‘ನೃತ್ಯ ಭಾವಗಾನ’ ಪ್ರಸ್ತುತಗೊಂಡಿತು. ಶ್ರೀಮತಿ ಅಕ್ಷತಾ ಬೈಕಾಡಿ ಹಾಗೂ ಕಲಾಶ್ರೀ ವಿದುಷಿ ರಾಜಶ್ರೀ ಮತ್ತು ಬಳಗದಿಂದ ಭಾರತನಾಟ್ಯ, ಮತ್ತು ಜಯಲಕ್ಷ್ಮೀ ಶಾಸ್ತ್ರಿ, ಆಕೃತಿ ಭಟ್, ರಂಜಿನಿ ಶೆಟ್ಟಿ, ಜ್ಯೋತಿ ಗುರುಪ್ರಸಾದ್, ಶಶಿಕಲಾ ಸಾಲ್ಯಾನ್, ರತ್ನಾವತಿ ಬೈಕಾಡಿ, ಗೀತಾ ಮಲ್ಯ, ರಾಧಾ ಮುರಳೀಧರ್ ಹಾಗೂ ರೂಪಶ್ರೀ ನಾಗರಾಜ್ ಇವರಿಂದ ಭಾವಗಾನ ಪ್ರಸ್ತುತಗೊಂಡಿತು.