ಬೆಂಗಳೂರು : ಶ್ರೀ ವಾಗ್ದೇವಿ ಗಮಕಕಲಾ ಪ್ರತಿಷ್ಠಾನ (ರಿ) ಬೆಂಗಳೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು, ಕನ್ನಡ ಸಹೃದಯಿ ಪ್ರತಿಷ್ಠಾನ ಹಾಗೂ ಕುಮಾರವ್ಯಾಸ ಮಂಟಪ ಇದರ ಸಹಕಾರದೊಂದಿಗೆ ಆಯೋಜಿಸುವ ವಾರ್ಷಿಕ ದತ್ತಿನಿಧಿ ಪ್ರಶಸ್ತಿಗಳಾದ ‘ಶ್ರೀ ವಾಗ್ದೇವಿ ಪ್ರಶಸ್ತಿ’, ಕೀರ್ತಿಶೇಷ ಗುರು ಪದ್ಮಶ್ರೀ ಹೆಚ್.ಆರ್.ಕೇಶವಮೂರ್ತಿ ಸ್ಮಾರಕ ಉತ್ತಮ ‘ಗಮಕ ಶಿಕ್ಷಕ ಪ್ರಶಸ್ತಿ’ ಹಾಗೂ ದಿ. ಕೆ. ವಿ. ರವೀಂದ್ರನಾಥ ಟಾಗೋರ್ ‘ಯುವ ಪ್ರಶಸ್ತಿ’ ಪ್ರದಾನ ಸಮಾರಂಭವು ದಿನಾಂಕ 21-07-2024 ರಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಕುಮಾರವ್ಯಾಸ ಮಂಟಪದಲ್ಲಿ ನಡೆಯಲಿದೆ.
ಶ್ರೀ ವಾಗ್ದೇವಿ ಗಮಕಕಲಾ ಪ್ರತಿಷ್ಠಾನ ಇದರ ಅಧ್ಯಕ್ಷರಾದ ಡಾ. ಕೆ. ಪಿ. ಪುತ್ತೂರಾಯ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮೈಸೂರಿನ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬಿಜಾಪುರದ ಶ್ರೀ ಕಲ್ಯಾಣ ರಾವ್ ದೇಶಪಾಂಡೆ ಇವರಿಗೆ ‘ಶ್ರೀ ವಾಗ್ದೇವಿ ಪ್ರಶಸ್ತಿ’, ಬೇಲೂರಿನ ಶ್ರೀಮತಿ ನವರತ್ನಾ ಎಸ್. ವಟಿ ಇವರಿಗೆ ಕೀರ್ತಿಶೇಷ ಗುರು ಪದ್ಮಶ್ರೀ ಹೆಚ್. ಆರ್. ಕೇಶವಮೂರ್ತಿ ಸ್ಮಾರಕ ‘ಉತ್ತಮ ಗಮಕ ಶಿಕ್ಷಕ ಪ್ರಶಸ್ತಿ’ ಹಾಗೂ ಬೆಂಗಳೂರಿನ ಕುಮಾರಿ ಆಶ್ರಿತಾ ಎಸ್. ಇವರಿಗೆ ದಿ. ಕೆ. ವಿ. ರವೀಂದ್ರನಾಥ ಟಾಗೋರ್ ‘ಯುವ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗುವುದು.
ಸಮಾರಂಭದಲ್ಲಿ ಕಿಶೋರ ಗಮಕ ಗೋಷ್ಠಿ, ಸಮೂಹ ಗಾನ, ಕಾವ್ಯಾಮೋದ, ಪ್ರಶಸ್ತಿ ಪುರಸ್ಕೃತರಿಂದ ಗಮಕ ಗೋಷ್ಠಿ, ಮುಂತಾದ ಕಾರ್ಯಕ್ರಮಗಳು ನಡೆಯಲಿವೆ.
ಶ್ರೀ ಕಲ್ಯಾಣ ರಾವ್ ದೇಶಪಾಂಡೆ
ಶ್ರೀಮತಿ ನವರತ್ನಾ ಎಸ್. ವಟಿ
ಕುಮಾರಿ ಆಶ್ರಿತಾ ಎಸ್.