ಹಾಸನ : ಹಾಸನದ ಮಾಣಿಕ್ಯ ಪ್ರಕಾಶನ (ರಿ.), ಸಂಸ್ಥೆಯು 2015ರಿಂದಲೂ ವೈವಿಧ್ಯಮಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ವಿವಿಧ ಲೇಖಕರ 70ಕ್ಕೂ ಹೆಚ್ಚು ಕೃತಿಗಳನ್ನು ಮುದ್ರಣ ಮಾಡಿ ಕನ್ನಡ ಸಾರಸ್ವತ ಲೋಕಕ್ಕೆ ನೀಡುವುದರ ಜೊತೆಗೆ ದಾನಿಗಳ ಸಹಕಾರದಲ್ಲಿ ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ದತ್ತಿ ಪುರಸ್ಕಾರ ನೀಡಿ ಗೌರವಿಸುತ್ತಿದೆ ಎಂದು ಪ್ರಕಾಶಕಿ ದೀಪಾ ಉಪ್ಪಾರ್ ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಪ್ರಸಕ್ತ ವರ್ಷವೂ ಕಾವ್ಯ, ಕಥೆ, ಲಲಿತ ಪ್ರಬಂಧ, ಹಾಸ್ಯ ಪ್ರಬಂಧ : ಸಾಹಿತ್ಯ ಪ್ರಕಾರದ ಕೃತಿಗಳಿಗಾಗಿ ಈ ಕೆಳಗಿನ ದತ್ತಿ ಪ್ರಶಸ್ತಿಗಳಿಗೆ ಕೃತಿಗಳನ್ನು ಆಹ್ವಾನಿಸಲಾಗಿದೆ.
ದಿ. ಸಿ.ಪಿ. ನಾರಾಯಣಾಚಾರ್ಯ ಕಾವ್ಯ ಮಾಣಿಕ್ಯ ರಾಜ್ಯ ಪುರಸ್ಕಾರ 2024 (ಕಾವ್ಯ)
ದಿ. ಸಿ.ಪಿ. ನಾರಾಯಣಾಚಾರ್ಯ ಕಾವ್ಯ ಮಾಣಿಕ್ಯ ರಾಜ್ಯ ಪುರಸ್ಕಾರಕ್ಕೆ 2023ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ಕಾವ್ಯ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಹ್ವಾನಿತ ಕೃತಿಗಳಲ್ಲಿ ಆಯ್ಕೆಯಾದ ಪ್ರಥಮ ರೂ.3,000/- ನಗದು ಮತ್ತು ಪ್ರಶಸ್ತಿ ಫಲಕ, ದ್ವಿತೀಯ ರೂ.2,000/- ನಗದು ಮತ್ತು ಪ್ರಶಸ್ತಿ ಪುರಸ್ಕಾರ, ತೃತೀಯ ರೂ.1,000/- ನಗದು ಮತ್ತು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಎನ್. ಶೈಲಜಾ ಹಾಸನ್ ದತ್ತಿ ಪುರಸ್ಕಾರ 2024 (ಲಲಿತ ಪ್ರಬಂಧ)
ಹಿರಿಯ ಸಾಹಿತಿ ಎನ್. ಶೈಲಜಾ ಹಾಸನ ಹೆಸರಲ್ಲಿ ಕೊಡಮಾಡುವ ಎನ್. ಶೈಲಜಾ ಹಾಸನ ದತ್ತಿ ಪುರಸ್ಕಾರಕ್ಕೆ 2023ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ಲಲಿತ ಪ್ರಬಂಧ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಕೃತಿಗೆ ರೂ.3,000/- ನಗದು ಮತ್ತು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಪದ್ಮಾವತಿ ವೆಂಕಟೇಶ್ ದತ್ತಿ ಪುರಸ್ಕಾರ 2024 (ಕಥೆ)
ಕವಯಿತ್ರಿ ಪದ್ಮಾವತಿ ವೆಂಕಟೇಶ್ ಹೆಸರಲ್ಲಿ ಕೊಡಮಾಡುವ ಪದ್ಮಾವತಿ ವೆಂಕಟೇಶ್ ದತ್ತಿ ಪುರಸ್ಕಾರಕ್ಕೆ 2023ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಕಥಾ ಸಂಕಲನಕ್ಕೆ ರೂ.2,000/- ನಗದು, ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.
ದಿ. ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ ಪುರಸ್ಕಾರ 2024 (ಹಾಸ್ಯ ಪ್ರಬಂಧ)
ಹಿರಿಯ ಸಾಹಿತಿ ತುರುವೇಕೆರೆ ಪ್ರಸಾದ್ ಪ್ರಾಯೋಜಿತ ದಿ. ಶಾಂತಮ್ಮ ನಾಗರಾಜ್ ಸ್ಮಾರಕ ದತ್ತಿ ಪುರಸ್ಕಾರಕ್ಕೆ 2023ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡ ಕನ್ನಡ ಸ್ವತಂತ್ರ ಹಾಸ್ಯ ಪ್ರಬಂಧ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಯಾದ ಒಂದು ಅತ್ಯುತ್ತಮ ಕೃತಿಗೆ ರೂ.3,000/- ನಗದು ಮತ್ತು ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಆಸಕ್ತ ಲೇಖಕರು ಸಂಬಂಧಪಟ್ಟ ಪ್ರತಿ ದತ್ತಿ ಪುರಸ್ಕಾರಕ್ಕೆ 2023ರಲ್ಲಿ ಪ್ರಕಟವಾದ ತಮ್ಮ ಸಾಹಿತ್ಯ ಕೃತಿಗಳ ತಲಾ ಮೂರು ಪ್ರತಿಗಳನ್ನು ಹಾಗೂ ಪ್ರತ್ಯೇಕ ಹಾಳೆಯಲ್ಲಿ ಸ್ವಪರಿಚಯವನ್ನು ಲಗತ್ತಿಸಿ ದಿನಾಂಕ 15-08-2024ರೊಳಗೆ ತಲುಪುವಂತೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಿಕೊಡಬಹುದಾಗಿದೆ. ಆಯ್ಕೆಯಾದ ಕೃತಿ ಕರ್ತರು ತಾವೇ ಖುದ್ದಾಗಿ ಆಗಮಿಸಿ ಪ್ರಶಸ್ತಿ ಸ್ವೀಕರಿಸಬೇಕು. ನಿಗದಿತ ಕಾರ್ಯಕ್ರಮಕ್ಕೆ ಬರದಿದ್ದಲ್ಲಿ ಅಂಚೆ ಮೂಲಕ ಅಥವಾ ಮುಂದಿನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದಿಲ್ಲ. ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಬರುವ ಲೇಖಕರು ಮಾತ್ರ ಕೃತಿಗಳನ್ನು ಕಳುಹಿಸಿಕೊಡಬೇಕು. ಪ್ರಕಾಶನ ಹಾಗೂ ತೀರ್ಪುಗಾರರ ನಿರ್ಣಯವೇ ಅಂತಿಮವಾಗಿರುತ್ತದೆ. ಸ್ಪರ್ಧೆಯಲ್ಲಿ ಆಯ್ಕೆಯಾಗದ ಕೃತಿಗಳನ್ನು ಹಿಂತಿರುಗಿಸಲಾಗುವುದಿಲ್ಲ.
ವಿಳಾಸ : ದೀಪಾ ಉಪ್ಪಾರ್, ಪ್ರಕಾಶಕರು, ಮಾಣಿಕ್ಯ ಪ್ರಕಾಶನ, ಸಾಹಿತ್ಯ ಸೌಧ, ಮುಖ್ಯ ರಸ್ತೆ, ಕೆಂಪೇಗೌಡ ಲೇಔಟ್, ಹಾಸನಾಂಬ ನಗರ ಎದುರುಗಡೆ, ಸಾಲಗಾಮೆ ರಸ್ತೆ, ಹಾಸನ – 573219, ಮೊ – 9739878197 ಮತ್ತು 9483470794.