ಉಡುಪಿ : ಯಕ್ಷಗಾನ ಕೇಂದ್ರ ಇಂದ್ರಾಳಿ ಉಡುಪಿ (ಮಾಹೆ) ಮತ್ತು ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ (ಮಾಹೆ) ಇದರ ವತಿಯಿಂದ ‘ಬಡಗುತಿಟ್ಟಿನ ಎರಡನೇ ವೇಷ ಮತ್ತು ಪುರುಷ ವೇಷಗಳ ಯುದ್ಧದ ಸನ್ನಿವೇಶಗಳ ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ’ವನ್ನು ದಿನಾಂಕ 28-07-2024ರಂದು ಬೆಳಿಗ್ಗೆ ಗಂಟೆ 9-00ರಿಂದ ಉಡುಪಿಯ ಎಂ.ಜಿ.ಎಂ. ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಹಿರಿಯ ಯಕ್ಷಗಾನ ಕಲಾವಿದರಾದ ಶ್ರೀ ಐರೋಡಿ ಗೋವಿಂದಪ್ಪ ಇವರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಉಡುಪಿಯ ಯಕ್ಷಗಾನ ಕಲಾರಂಗ ಉಪಾಧ್ಯಕ್ಷರಾದ ಶ್ರೀ ಎಸ್.ವಿ. ಭಟ್ ಇವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ಆಯುಕ್ತರಾದ ಶ್ರೀ ಜಯಕರ ಶೆಟ್ಟಿ ಇಂದ್ರಾಳಿ ಇವರು ಅಧ್ಯಕ್ಷತೆ ವಹಿಸಲಿದ್ದು, ಯಕ್ಷಗಾನ ಬರಹಗಾರರಾದ ಶ್ರೀ ರಾಘವ ಶೆಟ್ಟಿ ಬೇಳೂರು ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.
ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣದಲ್ಲಿ ಭಾಗವಹಿಸುವ ಕಲಾವಿದರು : ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಚಂದ್ರಕಾಂತ ರಾವ್ ಮೂಡುಬೆಳ್ಳೆ, ಮದ್ದಳೆಯಲ್ಲಿ ಶ್ರೀ ಎನ್.ಜಿ. ಹೆಗಡೆ ಯಲ್ಲಾಪುರ ಮತ್ತು ಚೆಂಡೆಯಲ್ಲಿ ಶ್ರೀ ರಾಕೇಶ್ ಮಲ್ಯ ಹಳ್ಳಾಡಿ.
‘ಕೃಷ್ಣಾರ್ಜುನ ಕಾಳಗ’ದಲ್ಲಿ ಅರ್ಜುನ : ಶ್ರೀ ಕೋಟ ಸುರೇಶ ಬಂಗೇರ ಮತ್ತು ಕೃಷ್ಣ : ಶ್ರೀ ಪ್ರವೀಣ ಗಾಣಿಗ ಕೆಮ್ಮಣ್ಣು
‘ಸುಧನ್ವಾರ್ಜುನ’ದಲ್ಲಿ ಅರ್ಜುನ : ಶ್ರೀ ನರಾಡಿ ಭೋಜರಾಜ ಶೆಟ್ಟಿ ಮತ್ತು ಸುಧನ್ವ : ಶ್ರೀ ಕೊಳಲಿ ಕೃಷ್ಣ ಶೆಟ್ಟಿ
‘ಕರ್ಣಾರ್ಜುನ ಕಾಳಗ’ದಲ್ಲಿ ಕರ್ಣ : ಶ್ರೀ ಆಜ್ರಿ ಗೋಪಾಲ ಗಾಣಿಗ ಮತ್ತು ಅರ್ಜುನ : ಶ್ರೀ ಬೆದ್ರಾಡಿ ನರಸಿಂಹ ನಾಯ್ಕ ಇವರುಗಳು ಭಾಗವಹಿಸಲಿರುವರು.