Subscribe to Updates

    Get the latest creative news from FooBar about art, design and business.

    What's Hot

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಫ.ಗು.ಹಳಕಟ್ಟಿಯವರ 145ನೆಯ ಜನ್ಮದಿನೋತ್ಸವ ಆಚರಣೆ

    July 3, 2025

    ತುಳು ಸಾಹಿತ್ಯ ಅಕಾಡೆಮಿಯಲ್ಲಿ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ’ ಅಭಿಯಾನದ ಐದನೇ ಕಾರ್ಯಕ್ರಮ

    July 3, 2025

    ಲೇಖನ – ಪರಿಷತ್ತಿನ ಇನ್ನೊಂದು ನಡಿಗೆ ಬಾಯಾರು ಕಡೆಗೆ

    July 3, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಮಂಗಳೂರು ಪುರಭವನದಲ್ಲಿ ‘ಸನಾತನ ಗುರುಪರಂಪರ’
    Bharathanatya

    ಮಂಗಳೂರು ಪುರಭವನದಲ್ಲಿ ‘ಸನಾತನ ಗುರುಪರಂಪರ’

    July 25, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಮಂಗಳೂರು : ಮಂಗಳೂರಿನ ಸನಾತನ ನಾಟ್ಯಾಲಯದ ವತಿಯಿಂದ ಆಯೋಜಿಸಿದ ‘ಸನಾತನ ಗುರುಪರಂಪರ’ ಕಾರ್ಯಕ್ರಮವು 20 ಜುಲೈ 2024ರ ಶನಿವಾರದಂದು ಮಂಗಳೂರಿನ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯಿತು.
    ಕಾರ್ಯಕ್ರಮದಲ್ಲಿ ‘ಗುರು ನಮನ’ ಸ್ವೀಕರಿಸಿ ಮಾತನಾಡಿದ ಹಿರಿಯ ನೃತ್ಯಗುರು ಹಾಗೂ ವಿದ್ವಾಂಸರಾದ ಪ್ರತಿಭಾ ಎಲ್. ಸಾಮಗ ಹಿರಿಯರ ಪರಂಪರೆಯನ್ನು ಅನುಸರಿಸಿಕೊಂಡು ಬರುವ ಸನಾತನ ನಾಟ್ಯಾಲಯದ ನಡೆ ನಿಜಕ್ಕೂ ಶ್ಲಾಘನೀಯ. ಮಂಗಳೂರಿನಲ್ಲಿ ಹುಟ್ಟಿ ಉಡುಪಿಗೆ ಹೋದ ನನಗೆ ಇಲ್ಲಿನ ಗೌರವ ತವರು ಮನೆ ಸನ್ಮಾನದಂತಿದೆ. ಹೊಸ ತಲೆಮಾರಿನ ಪುಕ್ಕಳು ಪ್ರತಿಭಾವಂತರಿದ್ದಾರೆ. ಅವರು ಸಾಧನೆಯ ಪಥದಲ್ಲಿ ನಡೆಯುವಂತಾಗಲಿ.” ಎಂದು ಹೇಳಿದರು.
    ಉಡುಪಿಯ ‘ಸಮೂಹ’ ಇದರ ರಂಗ ನಿರ್ದೇಶಕ, ಸಾಹಿತಿ ಹಾಗೂ ಸಂಸ್ಕೃತಿ ಚಿಂತಕರಾದ ಕೀರ್ತಿಶೇಷ ಪ್ರೊ. ಉದ್ಯಾವರ ಮಾಧವ ಆಚಾರ್ಯ ಇವರ ‘ಗುರು ಸಂಸ್ಮರಣೆ’ಯನ್ನು ಧಾರ್ಮಿಕ ಚಿಂತಕರಾದ  ಎನ್.  ಆರ್. ದಾಮೋದರ ಶರ್ಮ ಬಾರ್ಕೂರು ನಡೆಸಿಕೊಟ್ಟರು. ಬಳಿಕ ಸನಾತನ ನಾಟ್ಯಾಲಯದ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಇವರ ಹಿರಿಯ ಶಿಷ್ಯೆ, ನಾಟ್ಯ ವಿದುಷಿಯರಾದ ಸಂಜನಾ ಭರತ್, ವೈಶ್ಯ ಶೆಟ್ಟಿ, ಕಾವ್ಯಶ್ರೀ, ದೀಪ್ತಿ ಐ., ಅಂಕಿತ ಬದಿಯಡ್ಕ ಮತ್ತು ಸಾಹಿತ್ಯ ಸುರೇಶ್ ಹಾಗೂ ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರಸ್ತುತಿ ನಡೆಯಿತು.
    ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ, ವಿದುಷಿ ಶಾರದಾಮಣಿ ಶೇಖರ್ ಮತ್ತು ವಿದುಷಿ ಶೀಲತಾ ನಾಗರಾಜ್ ಹಾಗೂ ಭ್ರಮರಿ ಶಿವಪ್ರಕಾಶ್ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleವಿಶ್ವಭಾರತಿ ರಜತ ವೈಭವದಲ್ಲಿ ‘ರಾಮಾಯಣ ದಶಪರ್ವ’ ತಾಳಮದ್ದಳೆಗೆ ಚಾಲನೆ
    Next Article ಶ್ರೀ ಕ್ಷೇತ್ರ ಕಾಂತಾವರದಲ್ಲಿ ಯಶಸ್ವಿಯಾಗಿ ನಡೆದ ‘ಯಕ್ಷೋಲ್ಲಾಸ 2024’
    roovari

    Add Comment Cancel Reply


    Related Posts

    ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ ಮತ್ತು ಪುಸ್ತಕ ಬಿಡುಗಡೆ | ಜುಲೈ 06

    June 30, 2025

    ಭರತನಾಟ್ಯ ಕಲಾವಿದೆ ಪಿ. ಎಂ. ಲಿದಿನಾ ಇವರಿಗೆ ‘ಕರುನಾಡ ಕಲ್ಪವೃಕ್ಷ’ ಪ್ರಶಸ್ತಿ

    June 28, 2025

    ಬೆಂಗಳೂರಿನ ನಯನ ಸಭಾಂಗಣದಲ್ಲಿ ‘ಕರುನಾಡ ಕಲ್ಪವೃಕ್ಷ ಪ್ರಶಸ್ತಿ’ ಪ್ರದಾನ

    June 28, 2025

    ನೃತ್ಯಾಂತರಂಗದಲ್ಲಿ ಶಿಲ್ಪಾ ನಂಜಪ್ಪರವರಿಂದ ಕೊಡವ ಕಥೆಗಳ ಭರತನಾಟ್ಯ ರೂಪಕ

    June 26, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.