ಸುರತ್ಕಲ್ : ಅಗರಿ ಪ್ರಶಸ್ತಿ, ಅಗರಿ ರಘುರಾಮ ಸಮ್ಮಾನ, ಅಗರಿ ಸಂಸ್ಮರಣೆ, ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಹಾಗೂ ಯಕ್ಷಗಾನ ಬಯಲಾಟ ಕಾರ್ಯಕ್ರಮವು 28 ಜುಲೈ 2024ರಂದು ಹೊಸಬೆಟ್ಟು ನವಗಿರಿ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
2023ನೇ ಸಾಲಿನ ಪ್ರತಿಷ್ಠಿತ ‘ಅಗರಿ ಪ್ರಶಸ್ತಿ’ಗೆ ಅಭಿಜ್ಞ ಯಕ್ಷಗಾನ ಭಾಗವತ ಪುತ್ತಿಗೆ ರಘುರಾಮ ಹೊಳ್ಳ ಆಯ್ಕೆಯಾಗಿದ್ದು, ಅಗರಿ ರಘುರಾಮ ಸಮ್ಮಾನ ಪುರಸ್ಕಾರಕ್ಕೆ ಉಡುಪಿಯ ಕಲೆ ಮತ್ತು ಸಮಾಜ ಸೇವಾ ಸಂಸ್ಥೆ ‘ಯಕ್ಷಗಾನ ಕಲಾರಂಗ’ ಆಯ್ಕೆ ಯಾಗಿದೆ.
ಅಂದು ಸಂಜೆ ಘಂಟೆ 3.00ರಿಂದ ನಡೆಯಲಿರುವ ಈ ಕಾರ್ಯಕ್ರಮಾದಲ್ಲಿ ಮೂಡುಬಿದಿರೆಯ ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದು, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ಶ್ರೀಹರಿನಾರಾಯಣ ದಾಸ ಆಸ್ರಣ್ಣ ಶುಭ ಹಾರೈಸಲಿದ್ದಾರೆ. ಈ ಸಂದರ್ಭದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯರಾದ ನಿಧೀಶ ಹೊಸಬೆಟ್ಟು, ರಾಘವೇಂದ ಎಚ್. ವಿ., ರಾಕೇಶ್ ಹೊಸಬೆಟ್ಟು ಇವರನ್ನು ಅಭಿನಂದಿಸಲಾಗುವುದು. ಸಂಸದ ಕ್ಯಾ. ಬ್ರಿಜೇಶ್ ಚೌಟ, ಉದ್ಯಮಿ ಶ್ರೀಕಾಂತ್ ಭಟ್, ಗುರುರಾಜ್ ಆಚಾರ್ ಹೊಸಬೆಟ್ಟು, ಪೆರ್ಮುದೆ ಸ. ಹಿ. ಪ್ರಾ. ಶಾಲೆಯ ಸಂಚಾಲಕ ರಮೇಶ್ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಭಾಕಾರ್ಯಕ್ರಮದ ಬಳಿಕ ಪುತ್ತಿಗೆ ರಘುರಾಮ ಹೊಳ್ಳ ಭಾಗವತಿಕೆಯಲ್ಲಿ ‘ದಕ್ಷಾ ಧ್ವರ’’ಯಕ್ಷಗಾನ ಬಯಲಾಟ ಪ್ರದರ್ಶನ ಜರಗಲಿದೆ.