ಮಂಗಳೂರು: ಲವಿ ಗಂಜಿಮಠ ಅವರು ಕೊಂಕಣಿ ಭಾಷೆಯಲ್ಲಿ ಬರೆದ ಕಿರು ಕಥೆಗಳ ಸಂಗ್ರಹ ‘ಆಗುಂಬೆಚಿ ಘುಂವ್ಡಿ’ ಪುಸ್ತಕದ ಲೋಕರ್ಪಣಾ ಸಮಾರಂಭವು 21 ಜುಲೈ 2024ನೇ ಭಾನುವಾರದಂದು ಮಂಗಳೂರಿನ ಸಂದೇಶ ಸಭಾಭವನದಲ್ಲಿ ನಡೆಯಿತು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ವತಿಯಿಂದ ನಡೆದ ಕೊಂಕಣಿ ಲೇಖಕರ ಸಹಮಿಲನದಲ್ಲಿ ಅಕಾಡೆಮಿ ಅಧ್ಯಕ್ಷ ಸ್ಪ್ಯಾನಿ ಅಲ್ವಾರಿಸ್ ಕೃತಿ ಲೋಕಾರ್ಪಣೆಗೊಳಿಸಿದರು. ಮೈಕಲ್ ಡಿಸೋಜ ಇವರ ವಿಷನ್ ಕೊಂಕಣಿ ಪುಸ್ತಕ ಯೋಜನೆ ಅನುದಾನದಲ್ಲಿ ಮುದ್ರಣಗೊಂಡ ಈ ಪುಸ್ತಕವು ಲವಿ ಗಂಜಿಮಠ ಇವರ ನಾಲ್ಕನೇ ಸಾಹಿತ್ಯ ಕೃತಿಯಾಗಿದೆ.
ಕಾರ್ಯಕ್ರಮದಲ್ಲಿ ಕೆ.ಎಲ್.ಎಸ್. ಸಂಚಾಲಕ ರಿಚರ್ಡ್ ಮೋರಸ್ ಅಕಾಡೆಮಿ ಸದಸ್ಯರಾದ ಸ್ವಪ್ನಾ, ನವೀನ್ ಲೋಬೊ, ರೋನೊ ಕ್ರಾಸ್ತಾ ಕೆಲರಾಯ್, ಸಮರ್ಥ್ ಭಟ್ ಹಾಗೂ ಸಂಪನ್ಮೂಲ ವ್ಯಕ್ತಿ ಐರಿನ್ ರೆಬೆಲ್ಲೊ ಉಪಸ್ಥಿತರಿದ್ದರು.