ತೆಕ್ಕಟ್ಟೆ: ತೆಕ್ಕಟ್ಟೆ ಹಯಗ್ರೀವದಲ್ಲಿ ಯಶಸ್ವೀ ಕಲಾವೃಂದದ ‘ಸಿನ್ಸ್ 1999 ಶ್ವೇತಯಾನ-47’ ಕಾರ್ಯಕ್ರಮದಡಿಯಲ್ಲಿ ಗುರುಪರಂಪರಾ ಸಂಗೀತ ಸಭಾ ಕುಂದಾಪುರ ಇದರ ವಾರ್ಷಿಕ ಕಾರ್ಯಕ್ರಮವು 28 ಜುಲೈ2024ರಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸಂಗೀತ ಗುರು ಸತೀಶ್ ಭಟ್ ಮಾಳಕೋಡು ಮಾತನಾಡಿ “ಸಂಗೀತದ ದೀಪ ಜಗತ್ತನ್ನೇ ಬೆಳಗಿವೆ. ಮಾನಸಿಕ ಸಮತೋಲನಕ್ಕಾಗಿ ಸಂಗೀತವು ನೆರವಾಗುತ್ತದೆ. ಸಂಗೀತದ ಬೆಳಕು ಪ್ರಪಂಚದಾದ್ಯಂತ ಪಸರಿಸಲಿ. ಮಾನವನಿಗೆ ಸಂಗೀತವೇ ಉಸಿರಾಗಬೇಕು. ಸಕಲ ಜೀವರಾಶಿಯೂ ಸಂಗೀತವನ್ನು ಆಸ್ವಾದಿಸುತ್ತದೆ.” ಎಂದರು.
ಸಂಗೀತ ವಿದುಷಿ ಪ್ರತಿಮಾ ಭಟ್ ಗೋಪಾಡಿ, ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ಕಾರ್ಯದರ್ಶಿ ವೆಂಕಟೇಶ ವೈದ್ಯ, ನಾಗರಾಜ ಭಟ್, ವೀಣಾ ನಾಯಕ್, ಕುಮಾರಿ ನೇಹಾ ಹೊಳ್ಳ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಗುರುಪರಂಪರಾ ಸಂಗೀತ ಸಭಾ ಶಿಷ್ಯರಿಂದ ಹಿಂದೂಸ್ಥಾನಿ ಸಂಗೀತ ಗಾಯನ ರಂಗದಲ್ಲಿ ಪ್ರಸ್ತುತಿಗೊಂಡಿತು.