ಮಂಗಳೂರು : ಚೇಳ್ಯಾರು ಇಲ್ಲಿರುವ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ (ರಿ.) ಇದರ ವತಿಯಿಂದ ‘ನಾಟ್ಯಾಂಜಲಿ ನೃತ್ಯ ರಂಜನಿ ಯುಗ್ಮ ಕುಸುಮಾಂಜಲಿ’ ಕಾರ್ಯಕ್ರಮವನ್ನು ದಿನಾಂಕ 4 ಆಗಸ್ಟ್ 2024 ಮತ್ತು 11 ಆಗಸ್ಟ್ 2024ರಂದು ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಜಿ ಎಡನೀರು ಮಠ ಇವರ ಅನುಗ್ರಹದೊಂದಿಗೆ ನೀಡುವ ಈ ಕಾರ್ಯಕ್ರಮವನ್ನು ಗುರು ಉಳ್ಳಾಲ ಶ್ರೀ ಮೋಹನ್ ಕುಮಾರರಿಗೆ 90 ವರ್ಷ ತುಂಬಿದ ಪ್ರಯುಕ್ತ ನಾಟ್ಯ ಮೋಹನ ನವತ್ಯುತ್ಸವ ಆಚರಣೆ ಸಂಭ್ರಮದಲ್ಲಿ ಗುರುಗಳಿಗೆ ಅರ್ಪಣೆ ಮಾಡಲಾಗಿದೆ.
ದಿನಾಂಕ 4 ಆಗಸ್ಟ್ 2024ರಂದು ಸಂಜೆ 4-44ಕ್ಕೆ ‘ನಾಟ್ಯಾಂಜಲಿ ನೃತ್ಯ ರಂಜನಿ’ ಹಾಗೂ ‘ನಾಟ್ಯಾಂಜಲಿ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮವನ್ನು ಶಾಂತಲಾ ನಾಟ್ಯ ಪ್ರಶಸ್ತಿ ಪುರಸ್ಕೃತ ಗುರು ಉಳ್ಳಾಲ ಶ್ರೀ ಮೋಹನ್ ಕುಮಾರ್ ಇವರು ದೇವತಾ ಜ್ಯೋತಿ ಪ್ರಜ್ವಲನೆ ಮಾಡಿ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕಲಾಶ್ರೀ ಡಾ. ಶ್ರೀಧರ್ ಇವರಿಗೆ ‘ನಾಟ್ಯಾಂಜಲಿ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಕರ್ನಾಟಕ ಕಲಾಶ್ರೀ ಗುರು ಪ್ರವೀಣ್ ಕುಮಾರ್ ಇವರ ಶಿಷ್ಯೆ ಕುಮಾರಿ ಶ್ರೀಮಾ ಉಪಾಧ್ಯಾಯ ಇವರಿಂದ ಏಕವ್ಯಕ್ತಿ ಭರತನಾಟ್ಯ, ದಂಪತಿಗಳಾದ ಶಿಜಿತ್ ಎನ್. ಮತ್ತು ಪಾರ್ವತಿ ಮೆನನ್ ಇವರಿಂದ ಯುಗಳ ಶಾಸ್ತ್ರೀಯ ನೃತ್ಯ ಹಾಗೂ ನಾಟ್ಯಾಚಾರ್ಯ ಕರ್ನಾಟಕ ಕಲಾಶ್ರೀ ಶ್ರೀ ಕಿರಣ್ ಸುಬ್ರಹ್ಮಣ್ಯಂ ಮತ್ತು ಶ್ರೀಮತಿ ಸಂಧ್ಯಾ ಕಿರಣ್ ರವರ ರಸಿಕ ಕಲಾ ವೃಂದ ಪ್ರಸ್ತುತ ಪಡಿಸುವ ‘ಭರತ ಪಲ್ಲವಿ’ ಕಾರ್ಯಕ್ರಮಗಳು ನಡೆಯಲಿದೆ.
ದಿನಾಂಕ 11 ಆಗಸ್ಟ್ 2024ರಂದು ಸಂಜೆ 5-00ಕ್ಕೆ ‘ಯುಗ್ಮ ಕುಸುಮಾಂಜಲಿ’ ಕಾರ್ಯಕ್ರಮವನ್ನು ವಿದ್ವಾನ್ ಕೆ. ಚಂದ್ರಶೇಖರ ನಾವಡ ಇವರ ಪುತ್ರಿಯರು ಹಾಗೂ ಶಿಷ್ಯೆಯರಾದ ವಿದುಷಿ ಅಂಜಲಿ ನಾಗಭೂಷಣ್ ಹಾಗೂ ವಿದುಷಿ ರಂಜನಿ ಕೃಷ್ಣ ಪ್ರಸಾದ್ ಇವರು ಉದ್ಘಾಟನೆ ಮಾಡಲಿರುವರು. ‘ನಾಟ್ಯ ಸಂಜೆ’ಯಲ್ಲಿ ಪ್ರವಿತಾ ಅಶೋಕ್‌ರವರ ಪುತ್ರಿಯರು ಹಾಗೂ ಶಿಷ್ಯೆಯರಾದ ಪೂರ್ವಿಕ ಮತ್ತು ಗಾರ್ಗಿ ದೇವಿ, ವಿದುಷಿ ಸುಮಂಗಲಾ ರತ್ನಾಕರ್ ಇವರ ಶಿಷ್ಯೆಯರಾದ ಧರಿತ್ರಿ ಭಿಡೆ ಮತ್ತು ಹಂಸಿನಿ ಭಿಡೆ, ವಿದುಷಿ ಶಾರದಾಮಣಿ ಶೇಖರ್ ರವರ ಶಿಷ್ಯೆಯರಾದ ಜಾಹ್ನವಿ ಎಸ್. ಶೇಕ ಮತ್ತು ಸಾನ್ವಿ ಎಸ್. ಶೇಕ, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣರವರ ಶಿಷ್ಯೆಯರಾದ ನಿವೇದಿತಾ ಕಾರಂತ ಮತ್ತು ಶಮಿತಾ ಕಾರಂತ, ವಿದುಷಿ ವಿದ್ಯಾಮನೋಜ್ ರವರ ಶಿಷ್ಯೆಯರಾದ ವಿದುಷಿ ಚೈತ್ರಾ ಕೊಪ್ಪಳ ಮತ್ತು ಚಂದನ ಕೊಪ್ಪಳ, ವಿದ್ವಾನ್ ಸುದೀರ್‌ರಾವ್ ಕೊಡವೂರು ಹಾಗೂ ಮಾನಸಿಸುದೀರ್ ರಾವ್‌ರವರ ಶಿಷ್ಯೆಯರಾದ ವಿದುಷಿ ಅನಘಶ್ರೀ ಮತ್ತು ಪ್ರಿಯಂವದ ಹಾಗೂ ವಿದುಷಿ ವೀಣಾ ಸಾಮಗ ಇವರ ಶಿಷ್ಯೆಯರಾದ ವಿದುಷಿ ರಾಧಿಕಾ ಮತ್ತು ಕು. ರಂಜಿತಾ ಇವರುಗಳು ನೃತ್ಯ ಪ್ರಸ್ತುತ ಪಡಿಸಲಿರುವರು.