ವಿವಿಧ ರಾಜ್ಯಗಳ ಸಾಧಕರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಗುರುವಾರ ಪ್ರದಾನ ಮಾಡಿದರು.
2019ನೇ ಸಾಲಿನ ಪ್ರಶಸ್ತಿಯನ್ನು ವಿನಾಯಕ ತೊರವಿ (ಹಿಂದೂಸ್ಥಾನಿ ಸಂಗೀತ), ವಸುಂಧರಾ ದೊರೆಸ್ವಾಮಿ (ಭರತನಾಟ್ಯ), ಮಂಜು ಭಾರ್ಗವಿ (ಕೂಚಿಪುಡಿ) ಸ್ವೀಕರಿಸಿದರು. 2020ನೇ ಸಾಲಿನ ಪ್ರಶಸ್ತಿಯನ್ನು ಆರ್.ಕೆ.ಪದ್ಮನಾಭ (ಕರ್ನಾಟಕ ಸಂಗೀತ) ಎಸ್.ಜಿ. ಲಕ್ಷ್ಮಿ ದೇವಮ್ಮ (ಜನಪದ), ಅರತಿ ಅಂಕಲಿಕರ್ (ಹಿಂದೂಸ್ಥಾನಿ ಸಂಗೀತ), 2021ನೇ ಸಾಲಿನ ಪ್ರಶಸ್ತಿಯನ್ನು ರವೀಂದ್ರ ಯಾವಾಗಲ್ (ತಬಲಾ), ಎಚ್.ಆರ್. ಲೀಲಾವತಿ (ಸುಗಮ ಸಂಗೀತ), ಗರ್ತಿಕೆರೆ ರಾಘಣ್ಣ (ಜನಪದ) ಹಾಗೂ ಡಿ. ಬಾಲಕೃಷ್ಣ (ವೀಣೆ ) ಅವರಿಗೆ ಫೆಬ್ರವರಿ 22ರಂದು ಪ್ರದಾನ ಮಾಡಲಾಯಿತು.
ರಂಗ ಭೂಮಿ – ವಸ್ತ್ರ ವಿನ್ಯಾಸ ವಿಭಾಗದಲ್ಲಿ 2020ರ ಪ್ರಶಸ್ತಿಯನ್ನು ಪುರುಷೋತ್ತಮ ತಲವಾಟ ಸ್ವೀಕರಿಸಿದರು. 500ಕ್ಕೂ ಹೆಚ್ಚು ನಾಟಕಗಳಿಗೆ ನೇಪಥ್ಯ ಕಲಾವಿದರಾಗಿ, ಅನೇಕ ನಾಟಕಗಳ ನಿರ್ದೇಶಕರಾಗಿ, ವಿನ್ಯಾಸಕಾರರಾಗಿ, ನಟರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು.
Subscribe to Updates
Get the latest creative news from FooBar about art, design and business.
Next Article ಮಾರ್ಚ್ 4, 5ರಂದು ಮೈಸೂರಿನಲ್ಲಿ “ಗಮ್ಯ ರಂಗ ಹಬ್ಬ-2023”