ಮಂಗಳೂರು : ಉತ್ಥಾನ ಮಾಸಪತ್ರಿಕೆಯು ಕಳೆದ ಹಲವು ದಶಕಗಳಿಂದ ರಾಜ್ಯಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿದ್ದು, ಈ ಬಾರಿಯ 2024ನೇ ಸಾಲಿನ ಉತ್ಥಾನ ವಾರ್ಷಿಕ ಕಥಾ ಸ್ಪರ್ಧೆಗೆ ಕಥೆಯನ್ನು ಆಹ್ವಾನಿಸಲಾಗಿದೆ. ಕಥಾ ಸ್ಪರ್ಧೆಯಲ್ಲಿ ವಿಜೇತರಿಗೆ ಮೊದಲನೇ ಬಹುಮಾನ ರೂ.ಹದಿನೈದು ಸಾವಿರ, 2ನೇ ಬಹುಮಾನ ರೂ.ಹನ್ನೆರಡು ಸಾವಿರ, ಮೂರನೇ ಬಹುಮಾನ ರೂ.ಹತ್ತು ಸಾವಿರ ಮತ್ತು ತಲಾ ರೂ.ಎರಡು ಸಾವಿರ ನಗದು ಬಹುಮಾನವನ್ನು ಐವರಿಗೆ ನೀಡಲಿದ್ದಾರೆ. ಕಥೆ ಬರೆಯುವವರು ಭಾಷಾಂತರವಾಗಲಿ ಅನುಕರಣೆಯಾಗಲಿ ಮಾಡಿರಬಾರದು. ಒಬ್ಬರಿಗೆ ಒಂದು ಕಥೆ ಬರೆಯಲು ಮಾತ್ರ ಅವಕಾಶ. ಬರೆಯುವ ಕಥೆಗಳು ಈವರೆಗೂ ಬೇರೆಲ್ಲೂ ಪ್ರಸಾರವಾಗಿರಬಾರದು ಹಾಗೂ ಕಥೆಯು ಮೂರು ಸಾವಿರ ಪದಗಳ ಮಿತಿಯಲ್ಲಿರಬೇಕು.
ಇ-ಮೇಲ್ ಮೂಲಕ ಕಳುಹಿಸುವವರು ಕಥೆಯನ್ನು ನುಡಿ, ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿ ಸಿದ್ದಪಡಿಸಿ, ಇ-ಮೇಲ್ ವಿಳಾಸ [email protected]ಕ್ಕೆ ಕಳುಹಿಸಬಹುದು ಹಾಗೂ ಕಥೆಗಳು 10 ಆಗಸ್ಟ್ 2024ರೊಳಗಾಗಿ ತಲುಪಲು ಕೊನೆಯ ದಿನಾಂಕವಾಗಿದೆ. ಪೋಸ್ಟ್ ಮೂಲಕ ಕಳುಹಿಸುವವರು ಉತ್ಥಾನ ವಾರ್ಷಿಕ ಕಥಾಸ್ಪರ್ಧೆ- 2024, ಕೇಶವ ಶಿಲ್ಪ, ಕೆಂಪೇಗೌಡ ನಗರ, ಬೆಂಗಳೂರು -04 ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗಾಗಿ 080-26604673/ 7795441894ಗೆ ಸಂಪರ್ಕಿಸಬಹುದು.