ಸುಳ್ಯ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸುಳ್ಯ ತಾಲೂಕು ಘಟಕ ಮತ್ತು ಕ.ಸಾ.ಪ. ಸುಳ್ಯ ಹೋಬಳಿ ಘಟಕ ಇದರ ಆಶ್ರಯದಲ್ಲಿ ಮುಂಗಾರು ಕವಿಗೋಷ್ಠಿ- ವರ್ಷ ವೈಭವವು ದಿನಾಂಕ 3 ಆಗಸ್ಟ್ 2024ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ.ಸಾ.ಪ. ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಸಾಹಿತಿ ಕುಮಾರಸ್ವಾಮಿ ತೆಕ್ಕುಂಜ ನೆರವೇರಿಸಿದರು. ಕ.ಸಾ.ಪ. ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ, ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ, ಶ್ರೀಮತಿ ಚಂದ್ರಮತಿ ಕೆ., ಗೌರವ ಕೋಶಾಧಿಕಾರಿ ದಯಾನಂದ ಆಳ್ವ, ನಿವೃತ್ತ ಉಪನ್ಯಾಸಕ ಎ. ಅಬ್ದುಲ್ಲ ಅರಂತೋಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಳ್ಯದ ಎನ್.ಎಂ.ಸಿ. ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಸಂಜೀವ ಕುದ್ಪಾಜೆಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಕವಿಗಳಾದ ಯೋಗೀಶ್ ಹೊಸೊಳಿಕೆ, ಹೇಮಾ ಗಣೇಶ ಕಜೆಗದ್ದೆ, ಸಾನು ಉಬರಡ್ಕ, ಡಾ.ಅನುರಾಧಾ ಕುರುಂಜಿ, ಉದಯಭಾಸ್ಕರ ಸುಳ್ಯ, ಲತಾಶ್ರೀ ಸುಪ್ರೀತ್ ಮೋಂಟಡ್ಕ, ಮಮತಾ ರವೀಶ್ ಪಡ್ಡಂಬೈಲು, ಪೂರ್ಣಿಮಾ ಮಡಪ್ಪಾಡಿ, ವಿಜಯಕುಮಾರ್ ಕಾಣಿಚ್ಚಾರ್, ವಿಮಲಾರುಣ ಪಡ್ಡಂಬೈಲು, ವಿನೋದ್ ಮೂಡಗದ್ದೆ, ರೇಷ್ಮಾ ಪೆರುವಾಜೆ ಕವನ ವಾಚನ ಮಾಡಿದರು. ಗಾಯಕರಾದ ಕೆ.ಆರ್. ಗೋಪಾಲಕೃಷ್ಣ, ಶ್ರೀಮತಿ ಎಂ.ವಿ. ಗಿರಿಜಾ, ಸಂಧ್ಯಾ ಮಂಡೆಕೋಲು ಪ್ರಸಿದ್ದ ಕವಿಗಳ ಕವಿತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ತೇಜಸ್ವಿ ಕಡಪಳ ಸ್ವಾಗತಿಸಿ, ಶ್ರೀಮತಿ ಚಂದ್ರಮತಿ ಕೆ. ವಂದಿಸಿ, ಚಂದ್ರಾವತಿ ಬಡ್ಡಡ್ಕ ಕಾರ್ಯಕ್ರಮ ನಿರೂಪಿಸಿದರು.