ಮಂಗಳೂರು : ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಮಂಗಳೂರು ಘಟಕ ವತಿಯಿಂದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಗಳನ್ನು ವಿವಿಧ ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಯಾವುದೇ ಮಾನ್ಯತೆ ಪಡೆದ ಪ್ರೌಢಶಾಲೆ/ ಕಾಲೇಜ್/ವಿ.ವಿ.ಗಳ ವಿದ್ಯಾರ್ಥಿಗಳು ಭಾಗವಹಿಸಬಹುದು. ಸ್ಪರ್ಧೆಯು 11 ಆಗಸ್ಟ್ 2024ರಂದು ಶಾರದಾ ವಿದ್ಯಾಲಯ ಕೊಡಿಯಾಲಬೈಲು ಇಲ್ಲಿ ನಡೆಯಲಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು ನೋಂದಣಿ ಕಡ್ಡಾಯವಾಗಿದ್ದು 8 ಆಗಸ್ಟ್ 2024 ಕೊನೆಯ ದಿನವಾಗಿದೆ.
‘ಶೈಕ್ಷಣಿಕ ಕ್ರಾಂತಿ ಹಾಗೂ ಸಾಮಾಜಿಕ ಬದಲಾವಣೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ದೃಷ್ಟಿಕೋನ’ ಎಂಬ ವಿಷಯದಲ್ಲಿ ಭಾಷಣ ಸ್ಪರ್ಧೆ ಹಾಗೂ ‘ನಮ್ಮ ಜೀವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳ ಪ್ರಾಮುಖ್ಯ’ ಎಂಬ ವಿಷಯದಲ್ಲಿ ಪ್ರಬಂಧ ಸ್ಪರ್ಧೆ ನಡೆಯಲಿದೆ.
ಪ್ರಬಂಧ ಸ್ಪರ್ಧೆಯು ಪ್ರೌಢಶಾಲಾ ವಿಭಾಗ 8, 9, 10 ತರಗತಿ ಹಾಗೂ ಕಾಲೇಜ್ ವಿಭಾಗ ಪಿ. ಯು. ಸಿ. ಹಾಗೂ ಪದವಿ.ವಿಭಾಗಗಳಲ್ಲಿ ನಡೆಯಲಿದ್ದು, ಭಾಷಣ ಸ್ಪರ್ಧೆಯು ಪ್ರೌಢಶಾಲೆ, ಕಾಲೇಜ್ ಮತ್ತು ಮುಕ್ತ ವಿಭಾಗ (18 ಮೇಲ್ಪಟ್ಟಯಾವುದೇ ವ್ಯಕ್ತಿಗಳು)ಗಳಲ್ಲಿ ನಡೆಯಲಿದೆ. ಮುಕ್ತ ವಿಭಾಗಕ್ಕೆ ಭಾಷಣದ 5 ನಿಮಿಷಕ್ಕೆ ಮೀರದ ವೀಡಿಯೊವನ್ನು 06 ಆಗಸ್ಟ್ 2024 ರ ಒಳಗಾಗಿ ಕಳುಹಿಸಬೇಕು. (email:[email protected]). ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಯನ್ನು 9343651753 ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳಿಗೆ ಯುವವಾಹಿನಿ ವತಿಯಿಂದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆ | 11 ಆಗಸ್ಟ್
No Comments1 Min Read
Related Posts
Comments are closed.