ಬೆಂಗಳೂರು : ರಂಗ ಸಂಗ, ಭಾರತೀಯ ವಿದ್ಯಾ ಭವನ, ಕಲಾ ಗಂಗೋತ್ರಿ (ರಿ.) ಮತ್ತು ನವ್ಯಚೇತನ ಟ್ರಸ್ಟ್ ಇವರುಗಳ ಸಹೋಯೋಗದಲ್ಲಿ ‘ಡಾ. ಎಚ್.ಕೆ.ಆರ್. 100ರ ನೆನಪು’ ಕಾರ್ಯಕ್ರಮವನ್ನು ದಿನಾಂಕ 8 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದೆ. ಡಾ. ಎಚ್.ಕೆ. ರಂಗನಾಥ ಜನ್ಮ ಶತಮಾನೋತ್ಸವ ವರ್ಷ 2024-25 100ನೆಯ ವರ್ಷದ ಹುಟ್ಟುಹಬ್ಬದ ನೆನಪಿನ ಕಾರ್ಯಕ್ರಮವಾಗಿದೆ.
ಖ್ಯಾತ ಕಲಾವಿದರಾದ ವಿದ್ವಾನ್ ಶ್ರೀ ಆನೂರು ಅನಂತಕೃಷ್ಣ ಶರ್ಮ ಮತ್ತು ತಂಡದವರಿಂದ ವಾದ್ಯವೃಂದ, ಆಕಾಶವಾಣಿಯವರಿಂದ ರೂಪಕ ‘ನುಡಿತೇರನೆಳೆದವರು’, ವೇದ ವಿದ್ವಾನ್ ಶ್ರೀ ರಾಜಗೋಪಾಲ ಶರ್ಮ ಇವರಿಂದ ವೇದಘೋಷ ಹಾಗೂ ಪುಷ್ಪ ನಮನ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6-00 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಭಾರತೀಯ ವಿದ್ಯಾ ಭವನದ ನಿರ್ದೇಶಕರಾದ ಶ್ರೀ ಹೆಚ್.ಎನ್. ಸುರೇಶ್ ಇವರಿಂದ ಜನ್ಮ ಶತಮಾನೋತ್ಸವ ವರ್ಷ ಉದ್ಘಾಟನೆ ನಡೆಯಲಿದೆ. ಕಲಾ ಗಂಗೋತ್ರಿ ರಂಗ ತಂಡದವರು ಡಾ. ಎಚ್.ಕೆ. ರಂಗನಾಥ ರಚಿಸಿರುವ ಡಾ. ಬಿ.ವಿ. ರಾಜಾರಾಂ ನಿರ್ದೇಶನದಲ್ಲಿ ‘ಅಮೃತ ವರ್ಷ’ ಎಂಬ ಹೊಸ ನಾಟಕವನ್ನು ಅಭಿನಯಿಸಲಿರುವರು.