ಕುಮಟಾ : ಯಕ್ಷಗಾನ ಸಂಶೋಧನಾ ಕೇಂದ್ರ (ರಿ.) ಮಣಕಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ಶ್ರಾವಣ ಯಕ್ಷ ಸಂಭ್ರಮ’ವನ್ನು ದಿನಾಂಕ 10 ಆಗಸ್ಟ್ 2024ರಂದು ಸಂಜೆ 4-00 ಗಂಟೆಗೆ ಕುಮಟಾ ಮೂರೂರು ರಸ್ತೆಯಲ್ಲಿರುವ ಹವ್ಯಕ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಶಾಸಕರಾದ ಶ್ರೀ ದಿನಕರ ಕೆ. ಶೆಟ್ಟಿ ಇವರು ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರವಿ ನಾಯಕ ಇವರು ಅತಿಥಿಯಾಗಿ ಭಾಗವಹಿಸಲಿರುವರು. ಕನ್ಯಾನ ವೆಂಕಟ್ರಮಣ ಭಟ್ಟ ವಿರಚಿತ ‘ಭಸ್ಮಾಸುರ ಮೋಹಿನಿ’ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರು ಶ್ರೀ ರಾಮಕೃಷ್ಣ ಹಿಲ್ಲೂರು, ಮದ್ದಲೆಯಲ್ಲಿ ಶ್ರೀ ಪರಮೇಶ್ವರ ಭಂಡಾರಿ ಕರ್ಕಿ ಮತ್ತು ಚಂಡೆಯಲ್ಲಿ ಶ್ರೀ ಗಜಾನನ ಹೆಗಡೆ ಸಾಂತೂರು ಹಾಗೂ ಮುಮ್ಮೇಳದಲ್ಲಿ ಶ್ರೀ ರಾಮಚಂದ್ರ ಹೆಗಡೆ ಕೊಂಡದಕುಳಿ, ಶ್ರೀ ನರಸಿಂಹ ಚಿಟ್ಟಾಣಿ, ಶ್ರೀ ವಿಘ್ನೇಶ್ವರ ಹಾವಗೋಡಿ, ಶ್ರೀ ಸುಬ್ರಹ್ಮಣ್ಯ ಮೂರೂರು, ಶ್ರೀ ಶಂಕರ ಹೆಗಡೆ ನೀಲಕೋಡು ಮತ್ತು ಶ್ರೀಧರ ಹೆಗಡೆ ಚಪ್ಪರಮನೆ ಇವರುಗಳು ಸಹಕರಿಸಲಿದ್ದಾರೆ.