ಸುರತ್ಕಲ್ : ಪರಮಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಧರ್ಮಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಶುಭಾಶೀರ್ವಾದದೊಂದಿಗೆ ಮಣಿ ಕೃಷ್ಣಸ್ವಾಮಿ ಅಕಾಡೆಮಿ (ರಿ.) ಇದರ ವತಿಯಿಂದ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಸಂಸ್ಥೆಯ ಸಹಕಾರದೊಂದಿಗೆ ಶ್ರೀ ವಿಶ್ವೇಶತೀರ್ಥ ಸಭಾಂಗಣದ ಉದ್ಘಾಟನಾ ಸಮಾರಂಭ ಮತ್ತು ‘ಮಂಜುನಾದ’ ಯೋಜನೆಗೆ ಎರಡು ವರ್ಷಗಳಾಗುತ್ತಿರುವ ಸಂಭ್ರಮದ ಪ್ರಯುಕ್ತ ‘ಸಂಗೀತ ಕಛೇರಿ’ಯು ದಿನಾಂಕ 14-08-2024ರಂದು ಸಂಜೆ ಗಂಟೆ 5-00ಕ್ಕೆ ಸುರತ್ಕಲ್ಲಿನ ಅನುಪಲ್ಲವಿಯಲ್ಲಿ ನಡೆಯಲಿದೆ.
ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷರಾದ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಇವರ ಗೌರವ ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟಿನ ಕಾರ್ಯದರ್ಶಿ ಶ್ರೀ ಬಿ. ಸೀತಾರಾಮ ತೋಳ್ಪಡಿತ್ತಾಯ ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿರುವರು. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಬಂಧಿತ ಕೃತಿಗಳ ರಚನೆ, ರಾಗ ಸಂಯೋಜನೆ ಹಾಗೂ ಸಂಗೀತ ಕಚೇರಿಯಲ್ಲಿ ಕಾರ್ಕಳದ ಆತ್ರೇಯೀ ಕೃಷ್ಣ ಇವರ ಹಾಡುಗಾರಿಕೆಗೆ ಕಾರ್ಕಳದ ಮಹಾತೀ ಕೆ. ವಯಲಿನ್, ಮೈಸೂರಿನ ನಂದನ್ ಕಶ್ಯಪ್ ಮೃದಂಗ ಮತ್ತು ಇನ್ನಂಜೆ ಕಾರ್ತಿಕ್ ಭಟ್ ಖಂಜೀರದಲ್ಲಿ ನೀಡಲಿದ್ದಾರೆ.
ಮಣಿ ಕೃಷ್ಣಸ್ವಾಮಿ ಆಕಾಡೆಮಿಯ ಕಾರ್ಯದರ್ಶಿಯಾದ ಪಿ. ನಿತ್ಯಾನಂದ ರಾವ್ ಹಾಗೂ ಸುರತ್ಕಲ್ ನಾಗರಿಕ ಸಲಹಾ ಸಮಿತಿ ಅಧ್ಯಕ್ಷರಾದ ಡಾ. ಕೆ. ರಾಜಮೋಹನ್ ರಾವ್ ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.