ಕುಮಟಾ : ಯಕ್ಷಗಾನ ಸಂಶೋಧನಾ ಕೇಂದ್ರ (ರಿ.) ಮಣಕಿ ಹಾಗೂ ಸತ್ವಾಧಾರ ಫೌಂಡೇಶನ್ (ರಿ.) ಸಂಕೊಳ್ಳಿ ಸಹಯೋಗದಲ್ಲಿ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 11 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಕುಮಟಾದ ದೀವಗಿ ಶ್ರೀ ರಾಮಾನಂದ ಸ್ವಾಮೀಜಿ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ.
ಅಮೃತ ಸೋಮೇಶ್ವರ ವಿರಚಿತ ‘ತ್ರಿಪುರ ಮಥನ’ ಎಂಬ ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರು ಶ್ರೀ ಶಂಕರ ಭಟ್ಟ ಬ್ರಹ್ಮೂರು ಮತ್ತು ಶ್ರೀ ಸರ್ವೇಶ್ವರ ಹೆಗಡೆ ಮೂರೂರು, ಮದ್ದಲೆಯಲ್ಲಿ ಶ್ರೀ ನಾಗರಾಜ ಭಂಡಾರಿ ಹಿರೇಬೈಲು ಮತ್ತು ಚಂಡೆಯಲ್ಲಿ ಶ್ರೀ ಗಜಾನನ ಹೆಗಡೆ ಸಾಂತೂರು ಹಾಗೂ ಮುಮ್ಮೇಳದಲ್ಲಿ ಡಾ. ಜಿ.ಎಲ್ ಹೆಗಡೆ ಕುಮಟಾ, ಶ್ರೀ ಸುಬ್ರಹ್ಮಣ್ಯ ಚಿಟ್ಟಾಣಿ, ಶ್ರೀ ಈಶ್ವರ ನಾಯ್ಕ ಮಂಕಿ, ಶ್ರೀ ಅಶೋಕ ಭಟ್ಟ ಸಿದ್ಧಾಪುರ, ಶ್ರೀ ಗುರುಪ್ರಸಾದ್ ಭಟ್ಟ ಮಾಡಗೇರಿ, ಶ್ರೀ ನಾಗೇಶ ಕುಳಿಮನೆ, ಶ್ರೀ ಸುಬ್ರಹ್ಮಣ್ಯ ಮೂರೂರು, ಶ್ರೀ ರಮಾಕಾಂತ ಮೂರೂರು ಹಾಗೂ ಸಹ ಕಲಾವಿದರು ಸಹಕರಿಸಲಿರುವರು.