01 ಮಾರ್ಚ್ 2023, ಮಂಗಳೂರು: ಮನಸ್ಸು ಮನಸ್ಸುಗಳ ಬೆಸೆಯುವ ಕೆಲಸ ಸಾಹಿತ್ಯದಿಂದ ಸಾಧ್ಯ ಎಂದು ಡಾ. ಹರಿಕೃಷ್ಣ ಪುನರೂರು ಹೇಳಿದ್ದಾರೆ. ಬಹುಭಾಷಾ ಕವಿಗೋಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ, ಪ್ರಶಸ್ತಿ ಪ್ರದಾನ, ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ಯುಗಪುರುಷ ನೇತೃತ್ವದಲ್ಲಿ ಕಥಾ ಬಿಂದು ಪ್ರಕಾಶನ ಆಶ್ರಯದಲ್ಲಿ ಬಹುಭಾಷಾ ಸಾಹಿತ್ಯ ಸಂಭ್ರಮ, ಪಿ. ಪ್ರದೀಪ್ ಕುಮಾರ್ ಅವರ ರಹಸ್ಯ ಗುಂಪು ಮತ್ತು ಕಣಜ ಎಂಬ ಎರಡು ಕೃತಿಗಳ ಅನಾವರಣ ಹಾಗೂ ಕಂಬಳ ಕ್ಷೇತ್ರದ ಸಾಧಕ ಪ್ರಸಾದ್ ಶೆಟ್ಟಿ, ಶ್ರೀನಿವಾಸ ಭಜನಾ ತಂಡದ ಅಧ್ಯಕ್ಷ ಕಿಶೋರ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಈ ಕಾರ್ಯಕ್ರಮವು ದಿನಾಂಕ 26 ಫೆಬ್ರವರಿ 2023 ಅದಿತ್ಯವಾರದಂದು ನಡೆಯಿತು.
ಸಾಹಿತ್ಯಿಕ ಕೆಲಸದಿಂದ ಆಗಲಿ
ಭುವನಾಭಿರಾಮ ಉಡುಪ ಕಾರ್ಯಕ್ರಮ ಉದ್ಘಾಟಿಸಿ, ಆಧುನಿಕತೆ ಬೆಳೆದು ಬಂದಂತೆ ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ಹೊಸ ಹೊಸ ಕವಿಗಳು ಹುಟ್ಟಿಕೊಂಡಿದ್ದಾರೆ. ಅವರನ್ನು ಇನ್ನಷ್ಟು ಮುಖ್ಯ ವಾಹಿನಿಗೆ ತರುವ ಕೆಲಸ ಇಂತಹ ಸಾಹಿತ್ಯಿಕ ಕೆಲಸ ಕಾರ್ಯದಿಂದ ಆಗಬೇಕೆಂದರು.
ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ, ಡಾ. ಹರಿಶ್ಚಂದ್ರ ಪಿ. ಸಾಲ್ಯಾನ್, ಆಳ್ವಾಸ್ ವಿದ್ಯಾಲಯದ ಉಪನ್ಯಾಸಕಿ ಸುಧಾರಾಣಿ ಮಾತಾಡಿದರು. ದಿನೇಶ್ ಶೆಟ್ಟಿ ಕಲ್ಯ, ಕಾದಂಬರಿಕಾರ ಪಿ.ವಿ. ಪ್ರದೀಪ್ ಕುಮಾರ್ ಸುನೀತಾ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
ಬಹು ಭಾಷಾ ಕವಿಗೋಷ್ಠಿ
ಮಾನಸ ಪ್ರವೀಣ್ ಭಟ್ ಅವರ ಸಂಚಾಲಕತ್ವದಲ್ಲಿ, ಉದಯ ಕುಮಾರ್ ಹಬ್ಬು ಬಾಲಕೃಷ್ಣ ಉಡುಪ, ಸರೋಜಿನಿ ಕುಲಾಲ್, ರಶ್ಮಿ ಸನಿಲ್, ಉಮೇಶ್ ಶಿರಿಯ, ಜೊಸ್ಸಿ ಪಿಂಟೋ, ಚಂದ್ರಿಕಾ ಕೈರಂಗಳ, ರೇಮಂಡ್ ತಾಕೊಡೆ, ಗೋಪಾಲಕೃಷ್ಣ ಶಾಸ್ತ್ರಿ, ಸೌಮ್ಯ ಗೋಪಾಲ್, ಉಮಾಗೌರಿ, ಮನ್ಸೂರ್ ಮೂಲ್ಕಿ, ಸುಲೋಚನಾ ಪಚ್ಚಿನಡ್ಕ, ದಾಯಮಣಿ ಎಕ್ಕಾರು, ಕೃಷ್ಣಾನಂದ ಶೆಟ್ಟಿ, ಪ್ರೇಮಾ ಮೂಲ್ಕಿ, ಪಂಕಜಾ ರಾಮ ಭಟ್, ಪರಿಮಳ, ರೇಖಾ ನಾರಾಯಣ ಪಕ್ಷಿಕೆರೆ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಸಂಭ್ರಮ ಕಾರ್ತಿಕ್ ಭಟ್ ಕಾರ್ಯಕ್ರಮ ನಿರೂಪಿಸಿ, ಅನುಷಾ ಕೊಡೆತ್ತೂರು ಸನ್ಮಾನ ಪತ್ರ ವಾಚಿಸಿ, ರೇಖಾ ಸುದೇಶ್ ರಾವ್ ವಂದಿಸಿದರು.