ಮಂಗಳೂರು : ಕೊಂಕಣಿ ಭಾಷೆಗೆ 20 ಆಗಸ್ಟ್ 1992ರಂದು ಸಾಂವಿಧಾನಿಕ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯು 20 ಆಗಸ್ಟ್ 2024ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ.
ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಕೊಂಕಣಿ ಭಾಷಾ ಮಂಡಳ(ರಿ.) ಇವರ ಸಹಯೋಗದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿವಿಧ ಕೊಂಕಣಿ ಸಂಘ ಸಂಸ್ಥೆಗಳು ಭಾಗವಹಿಸಲಿದೆ. ಅಂದು ಬೆಳಿಗ್ಗೆ ಕೊಂಕಣಿ ದ್ವಜಾರೋಹಣದ ಮೂಲಕ ಕಾರ್ಯಕ್ರಮ ಚಾಲನೆಗೊಂಡು ಬಳಿಕ ಹೈಸ್ಕೂಲ್ ವಿಭಾಗ ಹಾಗೂ ಕಾಲೇಜು ವಿಭಾಗದಲ್ಲಿ ವಿದ್ಯಾರ್ಥಿಗಳಿಗಾಗಿ ಕೊಂಕಣಿ ಸಾಂಸ್ಕೃತಿಕ ವೈಭವದ ವಿವಿಧ ಸ್ರ‍್ಧೆಗಳು ನಡೆಯಲಿವೆ.
ಅಪರಾಹ್ನ ಘಂಟೆ 4.30ರಿಂದ ಕೊಂಕಣಿ ಮಾನ್ಯತಾ ದಿನಾಚರಣೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಸನ್ಮಾನ್ಯ ಶ್ರೀ ಶಿವರಾಜ್ ಎಸ್. ತಂಗಡಗಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಸಾಂಸ್ಕೃತಿಕ ವೈಭವದ ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನವನ್ನು ವಿತರಣೆ ನಡೆಯಲಿದ್ದು, ಬಳಿಕ ವಿವಿಧ ಕೊಂಕಣಿ ಜಾನಪದ ಕಲಾತಂಡಗಳಿಂದ ಸಾಂಸ್ಕೃತಿಕ ವಿನೋದಾವಳಿ ನಡೆಯಲಿದೆ.