ಮಂಗಳೂರು : ಮಂಗಳೂರು ಸಂಸ್ಕೃತ ಸಂಘ ಹಾಗೂ ಕೆನರಾ ಪ್ರೌಢಶಾಲೆ ಉರ್ವ ಇದರ ಜಂಟಿ ಆಶ್ರಯದಲ್ಲಿ ದಿನಾಂಕ 31 ಆಗಸ್ಟ್ 2024 ಶನಿವಾರ ಮಧ್ಯಾಹ್ನ 2-00 ಗಂಟೆಯಿಂದ ಉರ್ವದ ಕೆನರಾ ಪ್ರೌಢಶಾಲೆಯ ಮಿಜಾರ್ ಗೋವಿಂದ ಪೈ ಸ್ಮಾರಕ ಸಭಾಂಗಣದಲ್ಲಿ ‘ಸಂಸ್ಕೃತೋತ್ಸವಃ’ ಕಾರ್ಯಕ್ರಮದಲ್ಲಿ ವಿವಿಧ ಸಂಸ್ಕೃತ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ.
ಸಂಸ್ಕೃತೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಡೊಂಗರಕೇರಿಯ ಕೆನರಾ ಪ್ರೌಢಾಶಾಲಾ ಸಮಿತಿಯ ಅಧಕ್ಷರಾದ ಶ್ರೀ ಡಿ. ವಾಸುದೇವ ಕಾಮತ್ ಇವರು ವಹಿಸಲಿದ್ದು, ಸುರತ್ಕಲ್ಲಿನ ಗೋವಿಂದದಾಸ ಪದವಿ ಮಹಾವಿದ್ಯಾಲಯದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಶ್ರೀ ಎಸ್. ವಾಗೀಶ ಶಾಸ್ತ್ರಿಯವರು ಉದ್ಘಾಟನೆ ಮಾಡಿ ಪ್ರಧಾನ ಭಾಷಣವನ್ನು ಮಾಡಲಿದ್ದಾರೆ. ಅತಿಥಿಗಳಾಗಿ ಕೆನರಾ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಅಧ್ಯಾಪಿಕೆಯರಾದ ಶ್ರೀಮತಿ ಇಂದುಮತಿ ಮತ್ತು ಶ್ರೀಮತಿ ಲಲನಾ ಜೆ. ಶೆಣೈಯವರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಗಂಟೆ 2-30ರಿಂದ ಮಂಗಳೂರು ತಾಲೂಕು ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಂಸ್ಕೃತ ಸ್ತೋತ್ರ ಕಂಠಪಾಠ, ಸುಭಾಷಿತ ಕಂಠಪಾಠ, ಏಕಪಾತ್ರಾಭಿನಯ, ಸಮೂಹಗಾನ ಸ್ಪರ್ಧೆ, ಸಮೂಹ ನೃತ್ಯ, ಸಂಸ್ಕೃತ ರಸಪ್ರಶ್ನೆ ಸ್ಪರ್ಧೆ ಹಾಗೂ ಸಂಸ್ಕೃತ ಭಾಷಣ ಸ್ಪರ್ಧೆ ಜರುಗಲಿದೆ. ಸಾಯಂಕಾಲ 4-30 ಗಂಟೆಗೆ ನಡೆಯುವ ಬಹುಮಾನ ವಿತರಣಾ ಸಮಾರಂಭದಲ್ಲಿ ಸಂಸ್ಕೃತ ಸಂಘದ ಗೌರವಾಧ್ಯಕ್ಷ ಕೆ.ಪಿ. ವಾಸುದೇವ ರಾವ್ ಅಧ್ಯಕ್ಷತೆಯನ್ನು ವಹಿಸಲಿದ್ದು, ಮಂಗಳೂರು ದಕ್ಷಿಣ ವಿಧಾನಸಭಾ ಶಾಸಕರಾದ ಮಾನ್ಯ ಶ್ರೀ ಡಿ. ವೇದವ್ಯಾಸ ಕಾಮತ್, ಡೊಂಗರಕೇರಿಯ ಕೆನರಾ ಪೌಢಶಾಲಾ ಸಮಿತಿಯ ಗೌರವ ಕಾರ್ಯದರ್ಶಿಯವರಾದ ಶ್ರೀ ಎಮ್. ರಂಗನಾಥ್ ಭಟ್, ವಿದ್ವಾನ್ ಶ್ರೀ ರಾಘವೇಂದ್ರ ಆಚಾರ್ಯ ಮಂಗಳೂರು, ಮಂಗಳೂರಿನ ಸಂಚಾಲಿಕಾ ರೋಗ ನಿರೋಧಕ ಚಿಕಿತ್ಸಾಲಯದ ಶ್ರೀಮತಿ ಸುಚಿತ್ರಾ ಎಸ್. ಶೆಣೈಯವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಿವೃತ್ತ ಸಂಸ್ಕೃತ ಪ್ರಾಧ್ಯಾಪಕ ಶ್ರೀ ಎಸ್. ವಾಗೀಶ ಶಾಸ್ತ್ರಿ ಹಾಗೂ ಸಂಸ್ಕೃತ ಉಪನ್ಯಾಸಕರಾದ ವಿದ್ವಾನ್ ಶ್ರೀ ವಾಸುದೇವ ಕಾರಂತ ಮತ್ತು ವಿದ್ವಾನ್ ಶ್ರೀ ಶ್ರೀಪತಿ ಭಟ್ ಇವರನ್ನು ಮಂಗಳೂರು ಸಂಸ್ಕೃತ ಸಂಘದ ವತಿಯಿಂದ ಸನ್ಮಾನಿಸಲಾಗುವುದು ಎಂಬುದಾಗಿ ಸಂಸ್ಕೃತ ಸಂಘದ ಅಧ್ಯಕ್ಷರಾದ ಶ್ರೀ ಪೈಕ ವೆಂಕಟರಮಣ ಭಟ್ ಹಾಗೂ ಕಾರ್ಯದರ್ಶಿ ಶ್ರೀ ಶ್ರೀನಿವಾಸ ಮಧ್ಯಸ್ಥ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಸ್ಕೃತೋತ್ಸವ ಸಂಯೋಜಕರಾದ ಶ್ರೀ ಬಿ. ಮುರಾರಿ ತಂತ್ರಿ 8553375123 ಮತ್ತು ಶ್ರೀ ರಮೇಶ ಆಚಾರ್ಯ 9449332653 ಇವರನ್ನು ಸಂಪರ್ಕಿಸಲು ಕೋರಲಾಗಿದೆ.