02 ಮಾರ್ಚ್ 2023, ಬೆಂಗಳೂರು : ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ವಿದುಷಿ ನೀಲಾ ರಾಮ್ ಗೋಪಾಲ್ (87) ಅವರು ಮಾರ್ಚ್ 1ರಂದು ಬುಧವಾರ ನಿಧನರಾದರು. ಅವರು ವಯೋಸಹಜ ಅನಾರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ. ತಮಿಳುನಾಡಿನ ಕುಂಭಕೋಣಂನಲ್ಲಿ 1935ರಲ್ಲಿ ಜನಿಸಿದ ವಿದುಷಿ ನೀಲಾ ಅವರು, ರಾಮ್ ಗೋಪಾಲ್ ಅವರನ್ನು ಮದುವೆಯಾದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ತಮಿಳುನಾಡಿನ ತ್ಯಾಗರಾಜಪುರಂ ಎಂಬ ಹಳ್ಳಿಯಿಂದ ಆರಂಭವಾದ ಅವರ ಗಾಯನ ಯಾತ್ರೆ, ಲಂಡನ್ ನ ಭಾರತೀಯ ಭವನದವರೆಗೂ ತಲುಪಿದೆ. 72 ಮೇಳಕರ್ತ ರಾಗಗಳನ್ನು ಹಾಡಿ 19 ಧ್ವನಿಸುರಳಿ ಹೊರತಂದಿದ್ದಾರೆ. 59ನೇ ವರ್ಷದಲ್ಲಿ ಅವರು ಕ್ಯಾನ್ಸರ್ ಗೆ ತುತ್ತಾಗಿದ್ದರು. ಕ್ಯಾನ್ಸರ್ ಜಯಿಸಿದ ಅವರು ಮತ್ತೆ ಗಾಯನದಲ್ಲಿ ತೊಡಗಿಕೊಂಡಿದ್ದರು. ಉತ್ತಮ ಮನೋಧರ್ಮ ವಿದ್ವತ್ಪೂರ್ಣ ಗಾಯನಕ್ಕೆ ಹೆಸರಾದ ನೀಲಾ ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಗಾಯನ ಲೋಕಕ್ಕೆ ನೀಡಿದವರು. ಇವರನ್ನು ಶಿಷ್ಯಂದಿರು “ನೀಲಾ ಮಾಮಿ” ಎಂದೇ ಕರೆಯುತ್ತಿದ್ದರು.
ಮದ್ರಾಸ್ ಮ್ಯೂಜಿಕ್ ಅಕಾಡೆಮಿ ನೀಡುವ ‘ಸಂಗೀತ ಕಲಾಚಾರ್ಯ’ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’, ರಾಮಸೇವಾ ಮಂಡಳಿ ನೀಡುವ ‘ಸಂಗೀತ ಚೂಡಾಮಣಿ’ ಸೇರಿ ಹಲವು ಪ್ರಶಸ್ತಿಗಳು ಅವರಿಗೆ ಒಲಿದು ಬಂದಿವೆ.
Subscribe to Updates
Get the latest creative news from FooBar about art, design and business.
Next Article ಶ್ರೀಮತಿ ಐರಿನ್ ಪಿಂಟೋ ರವರಿಗೆ ಕೊಂಕಣಿ ಸಾಹಿತ್ಯ ಪ್ರಶಸ್ತಿ