ಮಂಗಳೂರು : ಯಕ್ಷಗಾನ ಕಲಾವಿದ ಕೌಶಿಕ್ ಕರ್ಕೆರ ಇವರ ತಂಡದ ಯಕ್ಷಗಾನ ಪ್ರದರ್ಶನವು 14 ಆಗಸ್ಟ್ 2024ರಂದು ಕುತ್ತರ್ ಪದವು ಶ್ರೀ ರಾಜ ರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ರಾಜೇಶ್ ಅತ್ತಾವರ್ ಮಾತನಾಡಿ “ಯಕ್ಷಗಾನವು ಆರ್ಥಿಕ ಬೆಂಬಲದಿಂದ ಬೆಳಗುವ ರಾಜಕಲೆ. ಅದಕ್ಕೆ ಬೆಂಬಲ ಹಾಗೂ ಪ್ರೋತ್ಸಾಹ ಸದಾ ದೊರೆತ ಕಾರಣದಿಂದ ಅದು ಇಂದು ವಿಶ್ವಮಾನ್ಯ ಕಲೆಯಾಗಿ ಮೆರೆಯುತ್ತಿದೆ. ಎಲ್ಲಾ ದೇವಾಲಯಗಳೂ ಇದಕ್ಕೆ ಸಹಕರಿಸಬೇಕು. ಅಂತೆಯೇ ಸರಕಾರವೂ ತಕ್ಕ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ. ನಮ್ಮ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲೂ ಅದು ಬೆಳಗುತ್ತಿದೆ. ಧಾರ್ಮಿಕ ಕಲೆಗಳಿಗೆ ಧಾರ್ಮಿಕ ನೆಲೆಗಟ್ಟು ದೊರೆಯಲಿ.” ಎಂದು ಶುಭಹಾರೈಸಿದರು.
ವೇ. ಮೂ. ರಾಘವೇಂದ್ರ ಹೊಳ್ಳರು ಮಾತನಾಡಿ “ಲಲಿತ ಕಲೆಗಳ ಸಂವರ್ಧನೆಗಾಗಿ ಕಲೆ ಬೆಳೆಯಬೇಕು. ಅದರಲ್ಲೂ ನಮ್ಮ ಮಣ್ಣಿನ ಕಲೆ ಯಕ್ಷಗಾನಕ್ಕೆ ಸಂಘಟನೆಗಳು ಒತ್ತಾಸೆಯಾಗಿ ನಿಂತರೆ ಅವು ಚಿರಕಾಲ ಉಳಿಯಲು ಸಾಧ್ಯ.” ಎಂದು ಹೇಳಿದರು.
ಕ್ಷೇತ್ರದ ಪದಾಧಿಕಾರಿಗಳಾದ ಜಗನ್ನಾಥ ಸಾಲಿಯಾನ್, ಪವಿತ್ರಾಗಟ್ಟಿ,, ಸುನಿಲ್ ಗಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ಸ್ಕಂದ ಮಯ್ಯ ಮತ್ತು ಬಳಗದವರು ಪ್ರಾರ್ಥನೆ ನಡೆಸಿಕೊಟ್ಟರು. ಮಾಧವ ನಾವಡ ನಿರ್ವಹಿಸಿ, ವಿಜಯಲಕ್ಷ್ಮೀ ಧನ್ಯವಾದವಿತ್ತರು.
ಸಭಾಕಾರ್ಯಕ್ರಮದ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ವಾಸುದೇವ ಮಯ್ಯರ ಹಾಡುಗಾರಿಕೆಯಲ್ಲಿ ‘ಶ್ರೀಕೃಷ್ಣ ಕಾರುಣ್ಯ’ ಯಕ್ಷಗಾನ ಬಯಲಾಟ ಜರಗಿತು.
Subscribe to Updates
Get the latest creative news from FooBar about art, design and business.
ಕುತ್ತಾರ್ ಪದವು ಶ್ರೀ ರಾಜ ರಾಜೇಶ್ವರಿ ದೇವಸ್ಥಾನದಲ್ಲಿ ‘ಶ್ರೀಕೃಷ್ಣ ಕಾರುಣ್ಯ’ ಯಕ್ಷಗಾನ ಬಯಲಾಟ
No Comments1 Min Read
Previous Article‘ಗಾಂವ್ಕರ್ ಯಕ್ಷ ಶ್ರಾವಣ ಸಂಜೆ’ ಯಕ್ಷಗಾನ ಪ್ರದರ್ಶನ | ಆಗಸ್ಟ್ 20
Related Posts
Comments are closed.