ಮಳವಳ್ಳಿ : ರಂಗಬಂಡಿ ಇದರ ವತಿಯಿಂದ ‘ಮಳವಳ್ಳಿ ಸುಂದರಮ್ಮ ರಂಗೋತ್ಸವ 2024-25’ ಕಾರ್ಯಕ್ರಮಗಳನ್ನು ದಿನಾಂಕ 21 ಆಗಸ್ಟ್ 2024ರಿಂದ 25 ಆಗಸ್ಟ್ 2024ರವೆರೆಗೆ ಮಳವಳ್ಳಿಯ ಕೆ.ಎಸ್.ಆರ್.ಟಿ.ಸಿ. ಬಸ್ ಸ್ಟಾಂಡ್ ಹಿಂಭಾಗದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ.
ದಿನಾಂಕ 21 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ರಾಜ್ಯ ಪ್ರಶಸ್ತಿ ವಿಜೇತ ವೃತ್ತಿ ರಂಗಭೂಮಿಯ ಖ್ಯಾತ ರಂಗ ನಿರ್ದೇಶಕರಾದ ಶ್ರೀ ವೈ.ಎಂ. ಪುಟ್ಟಣ್ಣಯ್ಯ ಮತ್ತು ತಂಡದವರಿಂದ ಮಳವಳ್ಳಿ ಸುಂದರಮ್ಮ ನಟಿಸಿದ್ದ ನಾಟಕಗಳ ವಿಶೇಷ ರಂಗಸಂಗೀತ ಕಾರ್ಯಕ್ರಮ, ದಿನಾಂಕ 22 ಆಗಸ್ಟ್ 2024ರಂದು ಸಂಜೆ 7-00 ಗಂಟೆಗೆ ಮೈಮ್ ರಮೇಶ್ ಇವರ ನೃತ್ಯ ಸಂಯೋಜನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮೈಸೂರಿನ ಜಿ.ಪಿ.ಐ.ಇ.ಆರ್. ರಂಗ ತಂಡ ಪ್ರಸ್ತುತ ಪಡಿಸುವ ನಾಟಕ ‘ಮಂಟೇಸ್ವಾಮಿ ಕಥಾ ಪ್ರಸಂಗ’, ದಿನಾಂಕ 23 ಆಗಸ್ಟ್ 2024ರಂದು ಸಂಜೆ 7-00 ಗಂಟೆಗೆ ಸುಮತಿ ಕೆ.ಆರ್. ವಿನ್ಯಾಸ ಮತ್ತು ನಿರ್ದೇಶನದಲ್ಲಿ ಮಂಡ್ಯದ ವಿಮಲರಣದೀವೆ ಮಹಿಳಾ ನಾಟಕ ತಂಡದವರಿಂದ ‘ನ್ಯಾಯ ಕೇಳಿದ ನಿಂಗವ್ವ’ ಎಂಬ ನಾಟಕ ಪ್ರದರ್ಶನ, ದಿನಾಂಕ 24 ಆಗಸ್ಟ್ 2024ರಂದು ಸಂಜೆ 7-00 ಗಂಟೆಗೆ ಡಾ. ಉದಯ್ ಸೋಸಲೆ ಇವರ ವಿನ್ಯಾಸ ಮತ್ತು ನಿರ್ದೇಶನದಲ್ಲಿ ಸಮುದಾಯ ಬೆಂಗಳೂರು ಇವರು ‘ಸಂಕ್ರಾಂತಿ’ ನಾಟಕವನ್ನು ಅಭಿನಯಿಸಲಿರುವರು. ದಿನಾಂಕ 25 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಧಾರವಾಡದ ರಂಗಭೂಮಿಯ ರಂಗಸಂಗೀತ ನಿರ್ದೇಶಕರಾದ ಶ್ರೀ ರಾಘವ ಕಮ್ಮಾರ ಮತ್ತು ತಂಡದವರಿಂದ ‘ಆಧುನಿಕ ರಂಗಸಂಗೀತ ಕಾರ್ಯಕ್ರಮ’, ದಿನಾಂಕ 25 ಆಗಸ್ಟ್ 2024ರಂದು ಸಂಜೆ 7-00 ಗಂಟೆಗೆ ಗಣೇಶ ಮಂದಾರ್ತಿ ಇವರ ರಚನೆ, ಸಂಗೀತ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ಬೆಂಗಳೂರಿನ ‘ರಂಗಾಸ್ತೆ’ಯವರಿಂದ ‘ದ್ರೋಪತಿ ಹೇಳ್ತವ್ಳೆ’ ನಾಟಕ ಪ್ರದರ್ಶನ ನೀಡಲಿದ್ದಾರೆ.