ಬಂಟ್ವಾಳ: ಸಿದ್ಧಕಟ್ಟೆಯ ‘ಶ್ರೀ ಕ್ಷೇತ್ರ ಪೂಂಜ ಯಕ್ಷಮಿತ್ರರು’ ಸಂಘಟನೆ ವತಿಯಿಂದ 7ನೇ ವರ್ಷದ ಯಕ್ಷಗಾನ ತಾಳಮದ್ದಳೆ ಕೂಟ ಹಾಗೂ ‘ಸಿದ್ಧಕಟ್ಟೆ ಪ್ರಶಸ್ತಿ’ ಪ್ರದಾನ ಸಮಾರಂಭವು 18 ಆಗಸ್ಟ್ 2024ರ ಭಾನುವಾರದಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲೊರೆಟೊ ಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷರಾದ ಸುರೇಶ ಶೆಟ್ಟಿ ಮಾತನಾಡಿ “ಸಿದ್ದಕಟ್ಟೆ ಎಂಬ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಹಲವು ಮಂದಿ ಯಕ್ಷಗಾನ ಕಲಾವಿದರು ಹುಟ್ಟೂರಿನ ಹೆಸರನ್ನು ಹತ್ತೂರಿನಲ್ಲಿ ಪಸರಿಸಿದ್ದಾರೆ.” ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಎನ್. ಸೀತಾರಾಮ ರೈ ಪೆರಿಂಜೆ ಅವರಿಗೆ ‘ಸಿದ್ಧಕಟ್ಟೆ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಯಿತು.
ಫಲ್ಗುಣಿ ರೋಟರಿ ಕ್ಲಬ್ ಅಧ್ಯಕ್ಷ ಶಿವಯ್ಯ ಎಸ್. ಎಲ್. ಹಾಗೂ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಮಾತನಾಡಿದರು.ಸಂಯೋಜಕ ಹರಿಪ್ರಸಾದ್ ಶೆಟ್ಟಿ ಕುರುಡಾಡಿ, ಪ್ರಮುಖರಾದ ರಾಘವೇಂದ್ರ ಭಟ್, ರತ್ನಾಕರ ಶೆಟ್ಟಿ ಭಾಗವಹಿಸಿದ್ದರು.
ಉಪನ್ಯಾಸಕ ಯೋಗೀಶ ಕೈರೋಡಿ ಸ್ವಾಗತಿಸಿ, ಉಮೇಶ್ ಶೆಟ್ಟಿ ಪಾಲ್ಯ ಕಾರ್ಯಕ್ರಮ ನಿರೂಪಿಸಿ, ಗಣೇಶ ಶೆಟ್ಟಿ ಆರಂಬೋಡಿ ವಂದಿಸಿದರು.