ಮೈಸೂರು : ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ‘ಸುವರ್ಣ ಕರ್ನಾಟಕ : ನಾಟಕ 50 ರಾಷ್ಟ್ರೀಯ ವಿಚಾರ ಸಂಕಿರಣವನ್ನು ದಿನಾಂಕ 24 ಆಗಸ್ಟ್ 2024ರಂದು ಬೆಳಗ್ಗೆ 10-00 ಗಂಟೆಗೆ ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ಶ್ರೀ ಕೆ.ವಿ. ನಾಗರಾಜ ಮೂರ್ತಿ ಇದರ ಅಧ್ಯಕ್ಷತೆಯಲ್ಲಿ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಹೆಚ್.ಸಿ. ಮಹಾದೇವಪ್ಪ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿರುವರು. ಬೆಳಗ್ಗೆ 11-00 ಗಂಟೆಗೆ ನಡೆಯಲಿರುವ ಗೋಷ್ಠಿ 1ರಲ್ಲಿ ರಂಗ ನಿರ್ದೇಶಕರಾದ ಡಾ. ಸಿ. ಬಸವಲಿಂಗಯ್ಯ ಇವರು ಅಧ್ಯಕ್ಷತೆ ವಹಿಸಲಿದ್ದು, ‘ಚಳಿವಳಿಯ ರೂಪವಾಗಿ ರಂಗಭೂಮಿ’ ಎಂಬ ವಿಷಯದ ಬಗ್ಗೆ ಮೈಸೂರಿನ ಡಾ. ಎಸ್.ಆರ್. ರಮೇಶ್, ‘ಆಧುನಿಕ ರಂಗಭೂಮಿಯ ಅಭಿನಯ ವೈವಿಧ್ಯತೆ’ ಎಂಬ ವಿಷಯದ ಬಗ್ಗೆ ಬೆಂಗಳೂರಿನ ಡಾ. ಉದಯ ಸೋಸಲೆ, ‘ಭಾರತೀಯ ರಂಗಭೂಮಿಯಲ್ಲಿ ಕನ್ನಡ ನಾಟಕಗಳ ಪ್ರಭಾವ’ ಎಂಬ ವಿಷಯದ ಬಗ್ಗೆ ಹೈದ್ರಾಬಾದ್ ಡಾ. ತಾರಕೇಶ್ವರ್ ಹಾಗೂ ‘ಕನ್ನಡ ರಂಗ–ಸಂಗೀತ ವೈವಿಧ್ಯತೆ’ ಎಂಬ ವಿಷಯದ ಬಗ್ಗೆ ಮೈಸೂರಿನ ಡಾ. ಟಿ.ಸಿ. ಪೂರ್ಣಿಮಾ ಪ್ರಸಾದ್ ಇವರುಗಳು ವಿಷಯ ಮಂಡನೆ ಮಾಡಲಿದ್ದಾರೆ.
ಮಧ್ಯಾಹ್ನ 2-00 ಗಂಟೆಯಿಂದ ನಡೆಯಲಿರುವ ಗೋಷ್ಠಿ 2ರಲ್ಲಿ ರಂಗ ವಿಮರ್ಶಕರಾದ ಶ್ರೀ ಜಿ.ಎನ್. ಮೋಹನ್ ಇವರು ಅಧ್ಯಕ್ಷತೆ ವಹಿಸಲಿದ್ದು, ಶ್ರೀರಂಗಪಟ್ಟಣದ ಶ್ರೀ ಶ್ರೀಪಾದ ಭಟ್ ಇವರು ‘ರಂಗಕೃತಿಗಳಲ್ಲಿ ವೈಚಾರಿಕ ಪ್ರಜ್ಞೆ’, ಶಿವಮೊಗ್ಗದ ಶ್ರೀ ಸಾಸ್ವೇಹಳ್ಳಿ ಸತೀಶ್ ಇವರು ‘ರಂಗಭೂಮಿಯಲ್ಲಿ ಪುರಾಣ ಮತ್ತು ಜಾನಪದೀಯ ಪ್ರಜ್ಞೆ’ ಮತ್ತು ಪಾಂಡಿಚೆರಿ ಡಾ. ಪವಿತ್ರ ಇವರು ‘ರಂಗಶಿಕ್ಷಣ – ಐದು ದಶಕ’ ಎಂಬ ವಿಷಯಗಳ ಮಾಡನಾಡಲಿದ್ದಾರೆ. ಸಂಜೆ 4-30 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ಹಿರಿಯ ನಾಟಕಕಾರರಾದ ಡಾ. ಹೆಚ್.ಎಸ್. ಶಿವಪ್ರಕಾಶ್ ಇವರು ಸಮಾರೋಪ ಭಾಷಣ ಮಾಡಲಿರುವರು.