ಆಂಧ್ರಪ್ರದೇಶ: ಆಂಧ್ರಪ್ರದೇಶದ ಮಂತ್ರಾಲಯದಲ್ಲಿರುವ ಜಗದ್ಗುರು ಶ್ರೀಮದ್ ಮಧ್ವಾಚಾರ್ಯ ಮೂಲ ಮಠ ಸಂಸ್ಥಾನಂ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ವತಿಯಿಂದ ‘ನೃತ್ಯೋಹಂ’ ಭರತನಾಟ್ಯ ಕಾರ್ಯಕ್ರಮ 19 ಆಗಸ್ಟ್ 2024ರಂದು ನಡೆಯಿತು.
ಶ್ರೀ ರಾಘವೇಂದ್ರ ತೀರ್ಥ ಗುರು ಸಾರ್ವಭೌಮರ 353ನೇ ಆರಾಧನಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕಲಾ ಅಕಾಡೆಮಿ ಗುರು ವಿದುಷಿ ಶಾಲಿನಿ ಆತ್ಮಭೂಷಣ್ ಮಾರ್ಗದರ್ಶನದಲ್ಲಿ ನೃತ್ಯ ತಂಡದ ಕಲಾವಿದರು ಶಾಸ್ತ್ರೀಯ ನೃತ್ಯ ಪ್ರದರ್ಶನ ನೀಡಿದರು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ 108 ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ನೃತ್ಯ ತಂಡದ ಕಲಾವಿದರಿಗೆ ಫಲಮಂತ್ರಾಕ್ಷತೆ ನೀಡಿ ಹರಸಿದರು. ವೇದಿಕೆಯಲ್ಲಿ ಶ್ರೀಮಠದ ಆನಂದ ರಾವ್, ಪದ್ಮನಾಭ ಆಚಾರ್, ಜಯಪ್ರಕಾಶ್ ಮತ್ತಿತರರಿದ್ದರು. ಕಲಾ ತಂಡದ ಕಲಾವಿದರಾದ ಹಂಸಾನಂದಿನಿ, ಪೃಥ್ವಿಶ್ರೀ, ಶ್ರದ್ಧಾ ಎ., ತನುವಿ, ಫಲ್ಗುಣಿ ತೇಜಸ್ವೀ ರಾಜ್, ಭಾರತೀ, ನಿಹಾರಿಕಾ, ಶ್ರೀಮಾ, ಧನ್ಯಶ್ರೀ, ವೈಷ್ಣವೀ ವಿನಯ್ ಶರ್ಮಾ ನೃತ್ಯ ಪ್ರದರ್ಶನ ನೀಡಿದರು.