ಮಡಿಕೇರಿ : ಕೊಡಗು ಜಿಲ್ಲೆಯ ಸಾಹಿತಿಗಳು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ಶ್ರೀಮತಿ ಹಂಚೇಟಿರ ಫ್ಯಾನ್ಸಿ ಮುತ್ತಣ್ಣ ಇವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಮ್ಮ ಮಾವ ಮತ್ತು ಅತ್ತೆಯವರಾದ ದಿ. ಹಂಚೇಟಿರ ಕುಟ್ಟಪ್ಪ ಮತ್ತು ಕಾಮವ್ವ ದಂಪತಿಗಳ ಜ್ಞಾಪಕಾರ್ಥ ರೂ.50,000/-ಗಳ ದತ್ತಿನಿಧಿಯನ್ನು ದಿನಾಂಕ 24 ಆಗಸ್ಟ್ 2024ರಂದು ಸ್ಥಾಪಿಸಿರುತ್ತಾರೆ.
ದತ್ತಿಯ ಆಶಯವು – 1. ಕೊಡಗಿನ ಜಾನಪದ ಪ್ರಕಾರಗಳ ಹಿನ್ನೆಲೆ, ಹಾಡು, ಕುಣಿತಗಳ ಕುರಿತು ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಏರ್ಪಡಿಸುವುದು. 2. ಕೊಡಗಿನ ಒಂದು ಪದವಿ ಕಾಲೇಜಿನಿಂದ ಒರ್ವ ವಿದ್ಯಾರ್ಥಿಗೆ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ. 3. ಕೊಡಗಿನ ಜಾನಪದ ಕುರಿತು ಉಪನ್ಯಾಸ ಏರ್ಪಡಿಸುವುದು.
ದತ್ತಿಯ ಮೊತ್ತದ ಚೆಕ್ ಅನ್ನು ಜಿಲ್ಲಾ ಕ.ಸಾ.ಪ.ದ ಮಾಜಿ ಅಧ್ಯಕ್ಷರಾದ ಟಿ.ಪಿ. ರಮೇಶ್ ಇವರು ಮೂರ್ನಾಡು ಹೋಬಳಿ ಕ.ಸಾ.ಪ.ದ ಅಧ್ಯಕ್ಷರಾದ ಶ್ರೀಮತಿ ಈರಮಂಡ ಹರಿಣಿ ವಿಜಯ್, ಸದಸ್ಯರಾದ ಬೊಳ್ಳಜೀರ ಅಯ್ಯಪ್ಪ ಮತ್ತಿತರ ಸಮ್ಮುಖದಲ್ಲಿ ಸ್ವೀಕರಿಸಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿರುತ್ತಾರೆ.