ಬೆಂಗಳೂರು : ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ.) ಬೆಂಗಳೂರು ಇವರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರ್ಪಿಸುವ ‘ಗೀತ ಗೌರವ’ ಮತ್ತು ‘ಭಾವಾಭಿನಂದನೆ’ ಕಾರ್ಯಕ್ರಮವನ್ನು ದಿನಾಂಕ 31 ಆಗಸ್ಟ್ 2024ರಂದು ಸಂಜೆ 5-00 ಗಂಟೆಗೆ ಬೆಂಗಳೂರಿನ ಜೆ.ಸಿ. ರಸ್ತೆ, ಕನ್ನಡ ಭವನದ ನಯನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಮರೆಯಲಾಗದ ಮಹನೀಯರಾದ ಕಾವ್ಯ ಗಾಯನ ಪಿತಾಮಹ ಪಿ. ಕಾಳಿಂಗರಾವ್ ಮತ್ತು ಸಾವಿರ ಪದಗಳ ಸರದಾರ ಬಾಳಪ್ಪಾ ಹುಕ್ಕೇರಿ ಇವರುಗಳಿಗೆ ‘ಗೀತ ಗೌರವ’ ಮತ್ತು ಪ್ರಸಿದ್ಧ ಕವಿಗಳು ಹಾಗೂ ಸಾಹಿತಿಗಳಾದ ಡಾ. ನಾ. ದಾಮೋದರ ಶೆಟ್ಟಿ, ಖ್ಯಾತ ಗಾಯಕರಾದ ನಗರ ಶ್ರೀನಿವಾಸ ಉಡುಪ ಮತ್ತು ಖ್ಯಾತ ಗಾಯಕಿ ರತ್ನಮಾಲಾ ಪ್ರಕಾಶ್ ಇವರಿಗೆ ಜನ್ಮದಿನ ಶುಭಾಶಯದ ‘ಭಾವಾಭಿನಂದನೆ’. ಈ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಧರಣಿದೇವಿ ಮಾಲಗತ್ತಿ ಇವರು ಉದ್ಘಾಟಿಸಲಿದ್ದು, ಖ್ಯಾತ ಕವಿಗಳು ಮತ್ತು ಸಾಹಿತಿಗಳಾದ ಡಾ. ಹೆಚ್.ಎಸ್. ವೆಂಕಟೇಶಮೂರ್ತಿಯವರು ಅಧ್ಯಕ್ಷತೆ ವಹಿಸಲಿದ್ದಾರೆ.
ವೈ.ಕೆ. ಮುದ್ದುಕೃಷ್ಣ, ನಗರ ಶ್ರೀನಿವಾಸ ಉಡುಪ, ಡಾ. ಕಿಕ್ಕೇರಿ ಕೃಷ್ಣಮೂರ್ತಿ, ಪಿ. ಶಿವಶಂಕರ್, ಶರತ್ ಪಿ. ಕಾಳಿಂಗ ರಾವ್, ಪ್ರವೀಣ್ ಟಿ.ವಿ. ಪ್ರದೀಪ್ ಟಿ.ವಿ. ರವಿ ಕೃಷ್ಣಮೂರ್ತಿ, ರಾಜೇಶ್ ಬಾರ್ಕೂರ್, ಮಂಗಳಾರವಿ, ನಾಗಚಂದ್ರಿಕಾ ಭಟ್, ಸುನೀತಾ ಎಸ್. ಸುಪ್ರಿಯಾ ರಘು ನಂದನ್, ಸುರೇಖಾ ಹೆಗ್ಡೆ, ಮೀರಾ ಟಿ.ಎಸ್. ಮತ್ತು ಅಪರ್ಣಾ ನರೇಂದ್ರ ಇವರುಗಳ ಗೀತ ಗಾಯನಕ್ಕೆ ಕೀಬೋರ್ಡ್ – ರಾಜ್ ಕಿರಣ್ ರಾಜಾರಾಂ, ಕೊಳಲು – ಶಿವಲಿಂಗಪ್ಪ ರಾಜಪೂರ, ತಬಲ – ರವಿಕಿರಣ್ ರಾಜಾರಾಂ ಮತ್ತು ರಿದಂಪ್ಯಾಡ್ – ಎಂ.ಸಿ. ಶ್ರೀನಿವಾಸ್ ಇವರುಗಳು ವಾದ್ಯ ಸಹಕಾರ ನೀಡಲಿದ್ದಾರೆ.