ಬೆಂಗಳೂರು : ಕೊಡಗಿನ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಡಿವೈನ್ ಟೆಂಪಲ್ ಫೌಂಡೇಷನ್ (ರಿ.) ಬೆಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಿದ್ದ ‘ರಾಷ್ಟ್ರ ಮಟ್ಟದ ನೃತ್ಯೋತ್ಸವ’ ಕಾರ್ಯಕ್ರಮವು ದಿನಾಂಕ 18 ಆಗಸ್ಟ್ 2024ರಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಆವರಣ ನಯನ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕರಾದ ಶಶಿಧರ್ ಕೋಟಿ, ಸಿನಿಮಾ ಧಾರಾವಾಹಿ ನಿರ್ದೇಶಕರಾದ ಡಾ. ಸುಧಾಕರ್ ಬನ್ನಂಜೆ, ಸಮಾಜ ಸೇವಕರಾದ ಡಾ. ಶೇಖ್ ವಾಹಿದ್ ದಾವೂದ್, ಉಡುಪಿ ಚಲನಚಿತ್ರ ನಟರಾದ ನೀಲಕಂಠ ಅಡಿಗ, ಸಮಾಜ ಸೇವಕರಾದ ಡಾ. ಪಿ. ಶ್ರೀಧರ್, ಡಾ. ಬಿ.ವಿ. ಮುನಿರಾಜು, ಕಾರ್ಯಕ್ರಮದ ಗೌರವ ಅಧ್ಯಕ್ಷರಾದ ಕೆಂಚನೂರ್ ಶಂಕರ್, ಡಾ. ಲಕ್ಷ್ಮೀದೇವಿ ಹಾಗೂ ಡಾ. ಮೀರಾ ಕುಮಾರ್ ಹಾಗೂ ಇನ್ನೂ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯರಿಗೆ ‘ಶ್ರೀ ಕೆಂಗಲ್ ಹನುಮಂತಯ್ಯ ಸದ್ಬಾವನ ಪ್ರಶಸ್ತಿ’ ಹಾಗೂ ಮಕ್ಕಳಿಗೆ ಮಿನುಗು ತಾರೆ ರಾಷ್ಟ್ರ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಾಗಿದೆ. ಹಾಸನ, ಹುಣಸೂರು, ಬೆಂಗಳೂರು, ಕೊಡಗು ನಾನಾ ಕಡೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಉತ್ತಮ ನೃತ್ಯ ಪ್ರದರ್ಶನವನ್ನು ನೀಡಿದರು.