ಮೂಡಬಿದ್ರೆ : ತುಳುನಾಡಿನ ಮೂಲ ಜನಾಂಗದಲ್ಲಿ ಹುಟ್ಟಿದ ಕಾರಣಿಕ ಪುರುಷರ ಚರಿತ್ರೆಯನ್ನು ಲೋಕಮುಖಕ್ಕೆ ಸಾರುವರೆ ಸಿದ್ಧತೆ ನಡೆಸುತ್ತಿದೆ ಮೂಡಬಿದ್ರೆಯ ಯಕ್ಷ ಸಂಭ್ರಮ. ಬಿಲ್ಲವ, ಬಂಟ, ಮುಗೇರ ಹಾಗೂ ಸತ್ಯ ಸಾರಮಾನಿ ಜನಾಂಗದ ಕೋಟಿ – ಚೆನ್ನಯರು, ಕಾಂತಬಾರೆ – ಬುದಬಾರೆ, ಸಿರಿ – ಸೊನ್ನೆ – ಅಬ್ಬಯ – ದಾರಯ, ದೈಯು – ಪೆರ್ಣು – ಮಾನಿಗ, ಕಾನದ – ಕಟದರ ಇತಿಹಾಸವನ್ನು ಲೋಕ ಮುಖಕ್ಕೆ ಸಾರುವ ತುಳು ಯಕ್ಷ ಪರ್ಬವನ್ನು ಜಾತ್ರೆಯನ್ನಾಗಿಸುವರೇ ತೆಂಕು ತಿಟ್ಟಿನ 60ಕ್ಕೂ ಮಿಕ್ಕಿ ದಿಗ್ಗಜ ಕಲಾವಿದರ ಕೂಡುವಿಕೆಯಲ್ಲಿ ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಪ್ರಸಂಗ ರಚನೆಯ ಯಶಸ್ವೀ ಜೋಡಿ ಶ್ರೀ ನಿತಿನ್ ಕುಮಾರ್ ತೆಂಕಕಾರಂದೂರು ರಚಿಸಿ, ನಿರ್ದೇಶಿಸುವ ಶ್ರೀ ಯೋಗೀಶ್ ರಾವ್ ಚಿಗುರುಪಾದೆ ಪದ್ಯ ರಚನೆಯ ತುಳು ಪ್ರಸಂಗ ‘ಕುಲದೈವೋ ಬ್ರಹ್ಮ’ ಇದರ ಯಕ್ಷಗಾನ ಬಯಲಾಟವು ದಿನಾಂಕ 01 ಸೆಪ್ಟೆಂಬರ್ 2024ರಂದು ಮಧ್ಯಾಹ್ನ 2-00 ಗಂಟೆಗೆ ಮೂಡಬಿದ್ರೆಯ ಕನ್ನಡ ಭವನದಲ್ಲಿ ನಡೆಯಲಿದೆ.
ಕೆಮ್ಮಲೆ ಬೆರ್ಮೆರೆ ಕ್ಷೇತ್ರದ ಇತಿಹಾಸ ಸಹಿತ ಅಲೇರಿ ಕ್ಷೇತ್ರ, ಮೇಲ್ಬಂಗಾಡಿ ಕ್ಷೇತ್ರ, ಕೋಟೆಬಾಗಿಲು ಕ್ಷೇತ್ರ, ಪಾಜೆಗುಡ್ಡೆ ಕ್ಕೇತ್ರ, ಮೂಜೂರು ಮುಗೇರ್ಕಳ ಕ್ಷೇತ್ರ ಸಹಿತ ಹಿರ್ಗಾನ ಪಾಡಿ ಗರಡಿ ಕ್ಷೇತ್ರದ ಇತಿಹಾಸದ ಆಗರ ಈ ಪ್ರಸಂಗ, ಮೂಲ ತುಳುವರ ಸಿರಿವಂತಿಕೆಯನ್ನು ಲೋಕ ಮುಖಕ್ಕೆ ಸಾರುವವರಿದ್ದೇವೆ. ಇದೇ ಸಂದರ್ಭದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವ ಸಭಾಕಾರ್ಯಕ್ರಮದಲ್ಲಿ ನೂತನ ಪ್ರಸಂಗ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ನಡೆಯಲಿದೆ.