ಕಾಸರಗೋಡು : ಕರ್ನಾಟಕ ರಾಜ್ಯ ‘ಸ್ಪಂದನ ಸಿರಿ’ ವೇದಿಕೆಯ ಕಾಸರಗೋಡು ಜಿಲ್ಲಾ ಘಟಕದ ಆಶ್ರಯದಲ್ಲಿ ದಿನಾಂಕ 15 ಸಪ್ಟೆಂಬರ್ 2024 ರಂದು ಕಾಸರಗೋಡಿನ ಕನ್ನಡ ಭವನ ಗ್ರಂಥಾಲಯದಲ್ಲಿ ನಡೆಯುವ ಕೇರಳ -ಕರ್ನಾಟಕ ‘ಸ್ಪಂದನ ಸಿರಿ’ ಕೃಷಿ, ಕನ್ನಡ ಶಿಕ್ಷಣ ಮತ್ತು ಸಂಸ್ಕೃತಿ ಸಮ್ಮೇಳನದ ಆಮಂತ್ರಣ ಪತ್ರಿಕೆ ಲೋಕಾರ್ಪಣಾ ಸಮಾರಂಭವು ದಿನಾಂಕ 31 ಆಗಸ್ಟ್ 2024ರ ಶನಿವಾರದಂದು ಕಾಸರಗೋಡಿನ ಎಡನೀರು ಮಠದಲ್ಲಿ ನಡೆಯಿತು.
ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ “ಆಧ್ಯಾತ್ಮಿಕ, ಸಾಂಸ್ಕೃತಿಕ ವಿಚಾರಗಳ ಜತೆಗೆ ಕೃಷಿ ಸಂಸ್ಕೃತಿಯನ್ನು ಯುವಜನತೆ ಅಳವಡಿಸಿಕೊಯಳ್ಳಬೇಕು. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ಸಾಹಿತ್ಯ ಹಾಗೂ ಕೃಷಿಯ ಕುರಿತು ಜಾಗೃತಿ ಮೂಡಿಸಬೇಕು.” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಪಂದನ ಸಿರಿ ವೇದಿಕೆಯ ಗೌರವ ಸಲಹೆಗಾರರಾದ ಕೆ. ವಾಮನ್ ರಾವ್ ಬೇಕಲ್, ಸ್ಪಂದನ ಸಿರಿ ಜಿಲ್ಲಾ ಅಧ್ಯಕ್ಷರಾದ ವಿರಾಜ್ ಅಡೂರು, ಸಾಮಾಜಿಕ ಮುಖಂಡರಾದ ಕಾಸರಗೋಡು ವೆಂಕಟ್ರಮಣ ಹೊಳ್ಳ, ಸಂಗೀತ ವಿದ್ವಾಂಸರಾದ ಬಳ್ಳಪದವು ಯೋಗೀಶ ಶರ್ಮ, ಶ್ರೀಮಠದ ವ್ಯವಸ್ಥಾಪಕ ರಾಜೇಂದ್ರ ಕಲ್ಲೂರಾಯ, ರಾಘವೇಂದ್ರ ಕೆದಿಲಾಯ, ಸಾಹಿತಿ ವೆಂಕಟ್ ಭಟ್ ಎಡನೀರು, ಕನ್ನಡ ಭವನದ ಪ್ರಕಾಶಕಿ ಸಂಧ್ಯಾರಾಣಿ ಟೀಚರ್, ಮೃದಂಗ ವಿದ್ವಾನ್ ಜಗದೀಶ ಡಿ. ಕುರ್ತಕೋಡು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Previous Article‘ಶ್ರೀಕೃಷ್ಣ ಮಾಸೋತ್ಸವ’ದ ಸಮಾರೋಪ | ಸೆಪ್ಟೆಂಬರ್ 1
Next Article ತುಳು ಕೂಟ (ರಿ.) ಕುಡ್ಲದ ಅಧ್ಯಕ್ಷ ದಾಮೋದರ ನಿಸರ್ಗ ನಿಧನ
Related Posts
Comments are closed.