ಮಂಗಳೂರು : ತುಳು ಕೂಟ (ರಿ.) ಕುಡ್ಲದ ಅಧ್ಯಕ್ಷರಾದ ದಾಮೋದರ ನಿಸರ್ಗ ಇವರು ದಿನಾಂಕ 31 ಆಗಸ್ಟ್ 2024ರಂದು ನಿಧನ ಹೊಂದಿದ್ದು, ಅವರಿಗೆ 52 ವರ್ಷ ವಯಸ್ಸಾಗಿತ್ತು.
ಸಂತಾಪ ಸಭೆಯಲ್ಲಿ ಮಾತನಾಡಿದ ತುಳುಕೂಟದ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ “ಓರ್ವ ಉದ್ಯಮಿಯಾಗಿ, ತುಳು ಅಕಾಡೆಮಿಯ ಪುನರ್ ಸ್ಥಾಪಿಸಲು ಹೆಣಗಿದವರು. ವಿಶ್ವ ತುಳುವೆರೆ ಪರ್ಬದ ಪ್ರಮುಖ ರೂವಾರಿಯೂ ಆಗಿ ದುಡಿದು ನಿಸ್ವಾರ್ಥ ಸೇವೆಗೈದ ಸಜ್ಜನ, ಮೆಲು ಮಾತಿನ ದಾಮಣ್ಣ ತುಳುಕೂಟದ ಸುವರ್ಣ ಸಂಭ್ರಮದ ಆಚರಣೆಯ ರೂಪು – ರೇಷೆಗಳನ್ನು ಹೊಂದಿದ್ದರು. ಅವರ ವಿದಾಯತೆ ತುಳು ಭಾಷಿಗರಿಗೆ ತುಂಬಲಾರದ ನಷ್ಟ” ಎಂದರು.
ಕೂಟದ ಉಪಾಧ್ಯಕ್ಷ ಜೆ.ವಿ. ಶೆಟ್ಟಿ ಮಾತನಾಡಿ “ದಾಮಣ್ಣ ಗೋಕರ್ಣನಾಥೇಶ್ವರ ಬ್ಯಾಂಕ್ ಇದರ ಅಧ್ಯಕ್ಷರಾಗಿ, ಕಂಕನಾಡಿ ಗರೋಡಿ ಕ್ಷೇತ್ರದ ಟ್ರಸ್ಟಿಗಳಾಗಿ, ಸೂರ್ಯನಾರಾಯಣ ದೇವಳದ ಮೊಕ್ತೇಸರರರಾಗಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಹಾನಗರ ಸಂಘ ಚಾಲಕರಾಗಿ ಸಮಾಜದ ಪ್ರತೀ ಕ್ಷೇತ್ರದಲ್ಲೂ ಸಮಾಜ ಸೇವೆಯನ್ನು ನಿಸ್ವಾರ್ಥವಾಗಿ ಮಾಡಿದವರು.” ಎಂದರು.
ಪದ್ಮನಾಭ ಕೋಟ್ಯಾನ್ ಮಾತನಾಡಿ “ನಿಸರ್ಗರು ಬಿಲ್ಲವ ಸಂಘಟನೆಗಳಲ್ಲೂ ಸಕ್ರಿಯರಾಗಿದ್ದರು. ಅಲ್ಲದೇ, ದೋಗ್ರ ಪೂಜಾರಿ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ 45 ವರ್ಷಗಳಿಂದ ಕಲಾವಿದರನ್ನು ಗುರುತಿಸಿ ಸನ್ಮಾನಿಸುತ್ತಾ , ಯಕ್ಷಗಾನ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಎಲ್ಲಾ ರಂಗದಲ್ಲೂ ಅನುಭವ ಪಡೆದವರು” ಎಂದರು.
ಕೋಶಾಧಿಕಾರಿ ಚಂದ್ರಶೇಖರ ಸುವರ್ಣ, ಜೊತೆ ಕಾರ್ಯದರ್ಶಿ ಪಿ. ಗೋಪಾಲ ಕೃಷ್ಣ, ಭಾಸ್ಕರ ಕುಲಾಲ್ ಬರ್ಕೆ, ರಮೇಶ್ ಕುಲಾಲ್ ಬಾಯಾರ್, ಸಂಜಾತಾ ಸುವರ್ಣ ಕೊಡ್ಮಾಣ್, ಸತ್ಯವತಿ ಮೊದಲಾದರು ಉಪಸ್ಥಿತರಿದ್ದರು.