Subscribe to Updates

    Get the latest creative news from FooBar about art, design and business.

    What's Hot

    ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ್ಸ್ ಪ್ರವೇಶಾತಿ ಅರ್ಜಿ ಆಹ್ವಾನ

    June 7, 2025

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » 2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗೆ ಹಸ್ತಪ್ರತಿಗಳ ಆಹ್ವಾನ | 25 ಅಕ್ಟೋಬರ್
    Awards

    2024ನೇ ಸಾಲಿನ ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗೆ ಹಸ್ತಪ್ರತಿಗಳ ಆಹ್ವಾನ | 25 ಅಕ್ಟೋಬರ್

    September 3, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email
    ಧಾರವಾಡ: ಧಾರವಾಡದ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯು 2024ನೇ ಸಾಲಿನ ರಾಘವೇಂದ್ರ  ಪಾಟೀಲ ಕಥಾ ಪ್ರಶಸ್ತಿಗೆ ಅಪ್ರಕಟಿತ ಕಥಾಸಂಕಲನಗಳ ಹಸ್ತಪ್ರತಿಗಳನ್ನು ಆಹ್ವಾನಿಸಿದೆ. ಈ ಪ್ರಶಸ್ತಿಯು ರೂಪಾಯಿ 20,000 ನಗದು, ಪ್ರಶಸ್ತಿ ಫಲಕ ಮತ್ತು ಸನ್ಮಾನವನ್ನು ಒಳಗೊಂಡಿರುತ್ತದೆ. ಆಸಕ್ತ ಲೇಖಕ/ಲೇಖಕಿಯರು ನಿಯಮಗಳಿಗನುಗುಣವಾಗಿ ಹಸ್ತಪ್ರತಿಗಳನ್ನು ಕಳುಹಿಸಲು ಸೂಚಿಸಲಾಗಿದೆ.
    ನಿಯಮಗಳು
    * ಈ ಕಥಾ ಪ್ರಶಸ್ತಿಗೆ ಮುಕ್ತ ಪ್ರವೇಶವಿದ್ದು, ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ.
    * ಲಿಂಗ, ವಯೋಮಿತಿ, ಜಾತಿ, ಧರ್ಮ, ಪ್ರದೇಶ ಸೇರಿದಂತೆ ಯಾವುದೇ ಕೃತಕ ಮಾನದಂಡಗಳಿರುವುದಿಲ್ಲ. ಗುಣಮಟ್ಟವೊಂದೇ ಆಯ್ಕೆಯ ಮಾನದಂಡ.
    * ಕಥೆಗಳು ಈ ಮೊದಲು ಪುಸ್ತಕ ರೂಪದಲ್ಲಿ ಪ್ರಕಟವಾಗಿರಬಾರದು. ಪತ್ರಿಕೆ ಮತ್ತು ವಿಶೇಷಾಂಕಗಳಲ್ಲಿ (ಪ್ರಿಂಟ್ ಅಥವಾ ಡಿಜಿಟಲ್ ಮೀಡಿಯಾ) ಪ್ರಕಟವಾದ ಕಥೆಗಳನ್ನು ಕಳುಹಿಸಬಹುದು.
    * ಕನಿಷ್ಠ 5 ಮತ್ತು ಗರಿಷ್ಠ 20 ಅಪ್ರಕಟಿತ ಕಥೆಗಳನ್ನು ಕಳುಹಿಸಬಹುದು.
    * ಕಥೆಗಳನ್ನು ಎ-4 ಅಳತೆಯ ಕಾಗದದಲ್ಲಿ 12ಫಾಂಟ್ ಅಳತೆಯಲ್ಲಿ ತಪ್ಪಿಲ್ಲದಂತೆ ಬೆರಳಚ್ಚು ಮಾಡಿ ಕಳುಹಿಸಬೇಕು.
    * ಹಸ್ತಪ್ರತಿಗಳು ಕನಿಷ್ಠ 80 ಪುಟ ಮತ್ತು ಗರಿಷ್ಠ 120 ಪುಟಗಳ ಮಿತಿಯನ್ನು ಮೀರಬಾರದು.
    * ಹಸ್ತಪ್ರತಿಗಳ ಮುದ್ರಿತ ಪ್ರತಿಗಳನ್ನು ತೆಗೆದು, ಬೈಂಡ್ ಮಾಡಿಸಿದ ಮೂರು ಪ್ರತಿಗಳನ್ನು ನಿಗದಿತ ದಿನಾಂಕದೊಳಗೆ ಕಳುಹಿಸಬೇಕು.
    * ಹಸ್ತಪ್ರತಿಗಳ ಹಾರ್ಡ್ ಕಾಪಿ ಮಾತ್ರ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಸಾಫ್ಟ್ ಕಾಪಿ ಸ್ವೀಕರಿಸಲಾಗುವುದಿಲ್ಲ.
    * ಲೇಖಕ/ಲೇಖಕಿಯರ ಸಂಕ್ಷಿಪ್ತ ಪರಿಚಯ, ಪೂರ್ಣ ವಿಳಾಸ ಮತ್ತು ಒಂದು ಫೋಟೋವನ್ನು ಹಸ್ತಪ್ರತಿಯೊಂದಿಗೆ ಪ್ರತ್ಯೇಕವಾಗಿ ಲಗತ್ತಿಸಬೇಕು.
    * ನಿಯಮಗಳನ್ನು ಪಾಲಿಸದ ಮತ್ತು ನಿಗದಿತ ದಿನಾಂಕದ ನಂತರ ಬಂದ ಹಸ್ತಪ್ರತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
    * ಹಸ್ತಪ್ರತಿಗಳನ್ನು ಕಳುಹಿಸಲು ಕೊನೆಯ ದಿನಾಂಕ 25 ಅಕ್ಟೋಬರ್ 2024
    ವಿಳಾಸ :
    ವಿಕಾಸ ಹೊಸಮನಿ
    ೨ನೇ ಕ್ರಾಸ್, ೨ನೇ ಮೇನ್,
    ದಾನೇಶ್ವರಿ ನಗರ, ಹಾವೇರಿ
    581110 (ಹಾವೇರಿ ಜಿಲ್ಲೆ)
    ಮೊ/ವಾ –  9110687473

    Share. Facebook Twitter Pinterest LinkedIn Tumblr WhatsApp Email
    Previous Articleಗುರುಪ್ರಸಾದ್ ಕೋಟೆಕಣಿಗೆ `ಶ್ರೇಷ್ಠ ಕನ್ನಡಿಗ’ ಪ್ರಶಸ್ತಿ ಪ್ರದಾನ
    Next Article ಸಂಗೀತ ವಿಮರ್ಶೆ | ಮಳೆರಾಗಗಳ ‘ರಿಮ್‌ಜಿಮ್’ ಸಂಗೀತ ಕಾರ್ಯಕ್ರಮ
    roovari

    Comments are closed.

    Related Posts

    ಕವನ – ಚೆಲುವಿನ ಸೃಷ್ಟಿ

    June 7, 2025

    ಮಡಿಕೇರಿಯಲ್ಲಿ ‘ಬೂಕರ್ ಪ್ರಶಸ್ತಿ’ ಪುರಸ್ಕೃತೆ ದೀಪಾ ಭಾಸ್ತಿಯವರಿಗೆ ಗೌರವ | ಜೂನ್ 09

    June 7, 2025

    ಡಾ. ಇಂದಿರಾ ಹೆಗ್ಗಡೆ ಇವರಿಗೆ ‘ಡಾ. ಎಂ. ಎಂ. ಕಲಬುರ್ಗಿ ಮಾನವಿಕ ಅಧ್ಯಯನ ಪ್ರಶಸ್ತಿ’

    June 7, 2025

    ಮೈಸೂರಿನಲ್ಲಿ ‘ರಾಜ್ಯಮಟ್ಟದ ಮೇಘಮೈತ್ರಿ 8ನೇ ಕನ್ನಡ ಸಾಹಿತ್ಯ ಸಮ್ಮೇಳನ -2025’ | ಜೂನ್ 08

    June 7, 2025

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.