ಉಡುಪಿ : ರಂಜನಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಉಡುಪಿಯ ಯಕ್ಷಗಾನ ಕಲಾರಂಗ ಇನ್ಫೋಸಿಸ್ ಹಾಲ್ ಇಲ್ಲಿ ಹಮ್ಮಿಕೊಂಡಿರುವ 9 ದಿನಗಳ ವಾರ್ಷಿಕ ಸಂಗೀತೋತ್ಸವವನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಡಿಪಾರ್ಟ್ ಮೆಂಟ್ ಆಫ್ ಸೋಶಿಯಲ್ ಸೈನ್ಸ್ ಡೀನ್ ಡಾ. ಬಿಂದಾ ಪರಾಂಜಪೆ ಇವರು ದಿನಾಂಕ 01 ಸೆಪ್ಟೆಂಬರ್ 2024ರಂದು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ಕಾರ್ಯದರ್ಶಿ ಮುರಳಿ ಕಡೆಕಾರ್ ಅವರನ್ನು ಗೌರವಿಸಲಾಯಿತು. ಈ ಸಂಗೀತೋತ್ಸವದಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕಲಾವಿದರಿಂದ ಗುಣಮಟ್ಟದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೊದಲ ದಿನದ ಕಾರ್ಯಕ್ರಮದಲ್ಲಿ ನಾಗೇಶ್ ಬಪ್ಪನಾಡು ಮತ್ತು ತಂಡದವರಿಂದ ನಾಗಸ್ವರ ವಾದನ, ವಿದ್ವಾಂಸರಾದ ಡಾ. ಬಿಂದಾ ಪರಾಂಜಪೆ ಇವರಿಂದ ‘ಕಲಾಕ್ಷೇತ್ರಕ್ಕೆ ದೇವದಾಸಿಯರ ಕೊಡುಗೆ’ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು.
ರಮಣ ಬಾಲಚಂದ್ರನ್ ಅವರು ವೀಣಾ ವಾದನದ ಮೂಲಕ ಮೊದಲ ದಿನದ ಪ್ರಧಾನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ರಂಜನಿ ಮೆಮೋರಿಯಲ್ ಟ್ರಸ್ಟಿನ ಮುಖ್ಯಸ್ಥ ಪ್ರೊ. ಅರವಿಂದ ಹೆಬ್ಬಾರ್ ಸ್ವಾಗತಿಸಿ, ಯುವ ಕಲಾವಿದೆ ಸಮನ್ವಿ ವಂದಿಸಿದರು.