ಮಂಗಳೂರು : ತುಳುಕೂಟ (ರಿ) ಕುಡ್ಲ ವತಿಯಿಂದ ಇತ್ತೀಚೆಗೆ ನಿಧನರಾದ ಮರೋಳಿ ಬಿ. ದಾಮೋದರ ನಿಸರ್ಗ ಇವರಿಗೆ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ದಿನಾಂಕ 09 ಸೆಪ್ಟೆಂಬರ್ 2024ರಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ “ತುಳು ಭಾಷೆ ಸಾಹಿತ್ಯ ಸಂಸ್ಕೃತಿಗಳ ಉಳಿವಿಗಾಗಿ ದಾಮೋದರ ನಿಸರ್ಗರು ಅರ್ಹಿನಿಶಿ ದುಡಿದಿದ್ದಾರೆ. ತಾನು ಬೆಳೆಯುವುದರ ಜೊತೆ ಜೊತೆಗೆ ತೌಳವರಿಗೆ ತುಳು ಬದುಕನ್ನು ಕಟ್ಟಿಕೊಟ್ಟಿದ್ದಾರೆ. ತುಳುಕೂಟದ ಬೆಳವಣಿಗಾಗಿ ಅವರು ಗಂಧದಂತೆ ತಮ್ಮನ್ನು ತೀಡಿಕೊಳ್ಳುತ್ತಾ ಇಂದು ಚಿರಸ್ಮರಣೀಯರಾಗಿ ಉಳಿದಿದ್ದಾರೆ. ಈ ರೀತಿ ಸಾವಿನ ನಂತರವೂ ನೆನಪುಳಿಯುವ ತುಳುವರು ಮತ್ತೆ ಮರಳಿ ಮರಳಿ ತುಳುಮಣ್ಣಲ್ಲಿ ಹುಟ್ಟಿಬರಲಿ” ಎಂದರು.
ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ತಾರಾನಾಥ, ಜೆ. ವಿ. ಶೆಟ್ಟಿ, ವರ್ಕಾಡಿ ರವಿ ಅಲೆವೂರಾಯ, ಚಂದ್ರಶೇಖರ ಸುವರ್ಣ, ಭಾಸ್ಕರ ಕುಲಾಲ್ ಬರ್ಕೆ, ನಾಗೇಶ ದೇವಾಡಿಗ ಕದ್ರಿ, ಶ್ರೀಮತಿ ಕೆ. ಎ. ರೋಹಿಣಿ, ಶೋಭಾ ಕೇಶವ್, ಮಮತಾ ಪ್ರವೀಣ್ , ಸುಜಾತಾ ಸುವರ್ಣ ಕೊಡ್ಮಾಣ್, ಕಾಮಾಕ್ಷಿ , ರಮೇಶ್ ಕುಲಾಲ್, ಪಿ. ಎ. ಪೂಜಾರಿ, ಸಂಜಯ ಕುಮಾರ್ ಶೆಟ್ಟಿ ಗೋಣಿಬೀಡು, ಎಡ್ವರ್ಡ್, ಸಾರಂಗ್, ದಿನೇಶ್ ಕುಂಪಲ, ಡಾ. ವಿನ್ಯಾಸ್ ಜತ್ತನ್ನ ಮುಂತಾದವರು ಉಪಸ್ಥಿತರಿದ್ದರು.