ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ), ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ (ರಿ.) ಮಂಗಳೂರು, ಅರೆಹೊಳೆ ಪ್ರತಿಷ್ಠಾನ ಮತ್ತು ಜೆ.ಸಿ.ಐ. ಮಂಗಳೂರು ಲಾಲ್ ಬಾಗ್ ಇವರ ಸಹಭಾಗಿತ್ವದಲ್ಲಿ ‘ರಾಷ್ಟ್ರೀಯ ಬಹುಭಾಷಾ ರಂಗೋತ್ಸವ -2024’ವನ್ನು ದಿನಾಂಕ 14-09-2024ರಿಂದ 17-09-2024ರವರೆಗೆ ಮಂಗಳೂರಿನ ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಇಲ್ಲಿ ಆಯೋಜಿಸಲಾಗಿದೆ.
ದಿನಾಂಕ 14 ಸೆಪ್ಟೆಂಬರ್ 2024ರಂದು ಮೈಸೂರಿನ ಅನುಭೂತಿ ತಂಡದವರಿಂದ ‘ದೀಪಧಾರಿಣಿ’ ಕೊಂಕಣಿ ನಾಟಕ, ದಿನಾಂಕ 15 ಸೆಪ್ಟೆಂಬರ್ 2024ರಂದು ಉಡುಪಿಯ ನೃತ್ಯನಿಕೇತನ ಕೊಡವೂರು (ರಿ.) ಇವರಿಂದ ಕನ್ನಡ ನಾಟಕ ‘ನೃತ್ಯಗಾಥಾ’, ದಿನಾಂಕ 16 ಸೆಪ್ಟೆಂಬರ್ 2024ರಂದು ಪಾಂಡಿಚೇರಿಯ ಆದಿಶಕ್ತಿ ತಂಡದವರಿಂದ ‘ಉರ್ಮಿಳಾ’ ಇಂಗ್ಲೀಷ್ ನಾಟಕ ಮತ್ತು ದಿನಾಂಕ 17 ಸೆಪ್ಟೆಂಬರ್ 2024ರಂದು ಮೈಸೂರಿನ ನಿರ್ದಿಗಂತ ತಂಡದವರಿಂದ ‘ಮರ ಮತ್ತು ಮನುಷ್ಯ’ (ಪಪೆಟ್ ಶೋ) ಹಾಗೂ ‘ಬ್ಲಾಕ್ ಬಲೂನ್’ ಕನ್ನಡ ನಾಟಕ ಪ್ರದರ್ಶನ ನಡೆಯಲಿದೆ.