Subscribe to Updates

    Get the latest creative news from FooBar about art, design and business.

    What's Hot

    ಕದ್ರಿ ಯಕ್ಷ ಮಂಜುಳಾ ಮಹಿಳಾ ಬಳಗದವರಿಂದ ‘ಯಕ್ಷಗಾನ ತಾಳಮದ್ದಳೆ’ | ಫೆಬ್ರವರಿ 24

    February 21, 2026

    ಕೋಟ ‘ಅಹರ್ನಿಶ’ದಲ್ಲಿ ‘ಯಕ್ಷ ಗಾನ ವೈಭವ’

    February 21, 2026

    ‘ಮಲಬಾರ್ ವಿಶ್ವರಂಗ ಪುರಸ್ಕಾರ-2026’ಕ್ಕೆ ಐವರು ಹಿರಿಯ ರಂಗಕರ್ಮಿಗಳು

    February 21, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಕ.ಸಾ.ಪ.ದಿಂದ ದಿನಕರ ದೇಸಾಯಿಯವರ 115ನೆಯ ಹುಟ್ಟು ಹಬ್ಬದ ಕಾರ್ಯಕ್ರಮ
    Literature

    ಕ.ಸಾ.ಪ.ದಿಂದ ದಿನಕರ ದೇಸಾಯಿಯವರ 115ನೆಯ ಹುಟ್ಟು ಹಬ್ಬದ ಕಾರ್ಯಕ್ರಮ

    September 11, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ದಿನಕರ ದೇಸಾಯಿಯವರ 115ನೆಯ ಹುಟ್ಟು ಹಬ್ಬದ ಕಾರ್ಯಕ್ರಮವು ದಿನಾಂಕ 10 ಸೆಪ್ಟೆಂಬರ್ 2024ರಂದು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿಯವರು ಮಾತನಾಡಿ ‘ಚುಟಕ ಬ್ರಹ್ಮ’ ಎಂದೇ ಪ್ರಖ್ಯಾತರಾದ ದಿನಕರ ದೇಸಾಯಿಯವರು ಮಹತ್ವದ ಸಾಹಿತಿ ಮಾತ್ರವಲ್ಲದೆ, ಡಾ. ಶಿವರಾಮ ಕಾರಂತರು ಗುರುತಿಸಿರುವಂತೆ ಏಕವ್ಯಕ್ತಿ ಸೈನ್ಯವಾಗಿ ಉತ್ತರ ಕರ್ನಾಟಕದ ಜನರ ಏಳಿಗೆಗಾಗಿ ದುಡಿದ ಮಹಾನ್ ಧೀಮಂತ ನಾಯಕ. ಸರಳವಾಗಿ ಕಂಡರೂ ಗಹನವಾದ ಜೀವನ ದರ್ಶನವನ್ನು ನೀಡುವುದು ಅವರ ಚುಟುಕಗಳ ವಿಶೇಷ. ಶಾಲಾ ಶಿಕ್ಷಕನ ಮಗನಾಗಿ ಜನಿಸಿದ ದೇಸಾಯಿ ಮುಂದೆ ಬಡವರ ಪಾಲಿಗೆ ಬಂಧುವಾದರು. ಮನೆ, ಮಠ ಇಲ್ಲದೆ ತುತ್ತು ಕೂಳಿಗೂ ಕಷ್ಟಪಡುತ್ತಿದ್ದ ಜನರಿಗೆ ಆಸರೆಯಾದರು. ಪ್ರಸಿದ್ಧ ಬರಹಗಾರರಾದರು. ದಿನಕರರು 1936ರಲ್ಲಿ ಮುಂಬೈನ ಹಡಗು ಕಾರ್ಮಿಕರ ಸಂಘಟನೆಯ ನೇತೃತ್ವ ವಹಿಸಿದ್ದರು. ಅಂಕೋಲದಲ್ಲಿ ‘ಜನಸೇವಕ’ ಎಂಬ ಪತ್ರಿಕೆಯನ್ನೂ ನಡೆಸುತ್ತಿದ್ದು, ಪ್ರಸಿದ್ಧ ಬರಹಗಾರರಾದ ಗೌರೀಶ್ ಕಾಯ್ಕಿಣಿ ಇವರು ಬಹಳ ವರ್ಷ ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು. 1953ರಲ್ಲಿ ಹುಟ್ಟು ಹಾಕಿದ ಕೆನರಾ ವೆಲ್ಫೇರ್ ಟ್ರಸ್ಟ್ ಶಿಕ್ಷಣ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ” ಎಂದು ವಿಶ್ಲೇಷಿಸಿದರು.

    ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್. ಶ್ರೀಧರ ಮೂರ್ತಿಯವರು ಮಾತನಾಡಿ “ದಿನಕರ ದೇಸಾಯಿಯವರು ಜನಪ್ರತಿನಿಧಿಯಾಗಿ ಆಯ್ಕೆಯಾದ ಮೊದಲ ಬರಹಗಾರರು. ಬರಹದ ಸಾಮಾಜಿಕ ಮುಖವನ್ನು ಎತ್ತಿ ಹಿಡಿದ ಅವರು ಬರಹದಲ್ಲಿ ತೋರಿದ ಪ್ರಾಮಾಣಿಕತೆಯನ್ನೇ ಸಂಸತ್ ಸದಸ್ಯರಾಗಿಯೂ ತೋರಿ, ಆ ಸ್ಥಾನದ ಘನತೆ ಗೌರವಗಳನ್ನು ಎತ್ತಿ ಹಿಡಿದರು” ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ. ರಾಮಲಿಂಗಶೆಟ್ಟಿ, ಡಾ. ಪದ್ಮಿನಿ ನಾಗರಾಜು, ಗೌರವ ಕೋಶಾಧ್ಯಕ್ಷರಾದ ಬಿ.ಎಂ. ಪಟೇಲ ಪಾಂಡು, ಕ.ಸಾ.ಪ. ಅಂತರಾಷ್ಟ್ರೀಯ ಸಮನ್ವಯಾಧಿಕಾರಿ ಶ್ರೀಮತಿ ನಿವೇದಿತಾ ಉನ್ನತಿಯವರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವ ಪ್ರಯುಕ್ತ ತಾಳಮದ್ದಳೆ
    Next Article ಆಳ್ವಾಸ್ ರಂಗತಂಡಕ್ಕೆ ರಂಗಭೂಮಿ ಕಲಾವಿದರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಸೆಪ್ಟೆಂಬರ್ 20
    roovari

    Comments are closed.

    Related Posts

    ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ವಿಚಾರ ಸಂಕಿರಣ

    February 21, 2026

    ಪುಸ್ತಕ ವಿಮರ್ಶೆ | ಮಾಲತಿ ಪಟ್ಟಣಶೆಟ್ಟಿಯವರ ಮಕ್ಕಳ ಮೂರು ನಾಟಕಗಳು

    February 21, 2026

    ಕೊಡವ ಸಾಹಿತ್ಯ ಅಕಾಡೆಮಿಯಿಂದ 15 ಸಾಧಕರಿಗೆ ಗೌರವ ಪ್ರಶಸ್ತಿ

    February 21, 2026

    ಕಡಂದಲೆಯಲ್ಲಿ ಮೂಡುಬಿದಿರೆ ತಾಲೂಕು ‘ಕನ್ನಡ ಸಾಹಿತ್ಯ ಸಮ್ಮೇಳನ’ | ಫೆಬ್ರವರಿ 21

    February 20, 2026

    Comments are closed.

    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.