ಬಂಟ್ವಾಳ : ರಾಜ್ಯಮಟ್ಟದ 7ನೇ ಶಿಕ್ಷಕ ಸಾಹಿತ್ಯ ಸಮ್ಮೇಳನ ದಿನಾಂಕ 05 ಸೆಪ್ಟೆಂಬರ್ 2024 ರಂದು ನಡೆಯಿತು. ಇದೇ ಸಂದರ್ಭದಲ್ಲಿ ಸಾಹಿತಿ ಹಾಗೂ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ, ಕಾಸರಗೋಡಿನ ಶಿಕ್ಷಕ ಹಾಗೂ ಕವಿ ವಿ. ಬಿ. ಕುಳಮರ್ವ, ಡಾ. ಸುರೇಶ ನೆಗಳಗುಳಿ, ಮುನಿರಾಜ ರೆಂಜಾಳ ಮೂಡುಬಿದಿರೆ, ಶಾಂತಾ ಪುತ್ತೂರು, ಬಾಣಸವಾಡಿಯ ಶ್ರೀಮತಿ ಸುಮಲತಾ ಬಿ. ಎಸ್, ಹಂಸಭಾವಿಯ ಡಾ. ಪ್ರಭುಸ್ವಾಮಿ ಹಾಲಿವಾಡಿ ಮಠ, ಹಾನಗಲ್ ಇಲ್ಲಿನ ಶ್ರೀ ರವಿರಾಜ ತಿರುಮಲೆ ಹಾಗೂ ಬಳಂಜ ಇಲ್ಲಿನ ಶ್ರೀ ರವೀಂದ್ರ ಶೆಟ್ಟಿ ಇವರಿಗೆ ‘ಚುಟುಕು ಚಿನ್ಮಯಿ’ ರಾಜ್ಯ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದ ಸಭಾಂಗಣದಲ್ಲಿ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾದ ಈ ಸಮ್ಮೇಳನದಲ್ಲಿ ದ. ಕ. ಜಿಲ್ಲೆಯ ಶಿಕ್ಷಕ ಸಾಹಿತಿಗಳಾದ ಅಶ್ವಥ್ ಎಸ್. ಎಲ್. ಕಾರ್ಕಳ, ಉಡುಪಿಯ ವಿದ್ವಾನ್ ರಘುಪತಿ ಭಟ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಕಟೀಲು ಹರಿನಾರಾಯಣ ಅಸ್ರಣ್ಣ, ಕ. ಚು. ಸಾ. ಪ. ರಾಜ್ಯ ಸಂಚಾಲಕ ಕೃಷ್ಣ ಮೂರ್ತಿ ಕುಲಕರ್ಣಿ, ಉಡುಪಿ ಜಿಲ್ಲಾಧ್ಯಕ್ಷ ಜಿ. ಯು. ನಾಯಕ, ಮೈಸೂರು ವಿಭಾಗಾಧ್ಯಕ್ಷ ಕೆ. ವಿ. ರಮೇಶ್, ಸಮ್ಮೇಳನಾಧ್ಯಕ್ಷ ಶ್ರೀಕಾಂತ ಕೆ. ವಿ. ಹೊಸಕೋಟೆ, ಡಾ. ವಾಣಿಶ್ರೀ ಕಾಸರಗೋಡು ಮೊದಲಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Comments are closed.