ಕಲಬುರುಗಿ : ಕನ್ನಡ ಸಾಹಿತ್ಯ ಪರಿಷತ್ತು ಜೇವರ್ಗಿ ಮತ್ತು ಮೈಸೂರಿನ ‘ಪರಂಪರೆ ಸಂಸ್ಥೆ’ ಇವರ ಸಹಯೋಗದಲ್ಲಿ ಏರ್ಪಡಿಸಿರುವ ರಾಜ್ಯ ಮಟ್ಟದ ಗಮಕ ಸಮ್ಮೇಳನವನ್ನು ದಿನಾಂಕ 21 ಸೆಪ್ಟೆಂಬರ್ 2024 ಮತ್ತು 22 ಸೆಪ್ಟೆಂಬರ್ 2024ರಂದು ಕಲಬುರುಗಿಯ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ 21 ಸೆಪ್ಟೆಂಬರ್ 2024ರಂದು ಬೆಳಗ್ಗೆ 9-30 ಗಂಟೆಗೆ ವಾದ್ಯ ಮೇಳಗಳು, ಗಮಕಿಗಳ ಹಾಡುಗಳು, ಪೂಜಾ ಕುಣಿತ ಮತ್ತು ಜಾನಪದ ಕಲಾ ಮೇಳದೊಂದಿಗೆ ಮೆರವಣಿಗೆ ನೆರವೇರಲಿದೆ. ಪೂಜ್ಯ ಮತೋಶ್ರೀ ಡಾ. ದಾಕ್ಷಾಯಣಿ ಎಸ್. ಅಪ್ಪ ಇವರ ದಿವ್ಯ ಸಾನಿಧ್ಯದಲ್ಲಿ ಮಾನ್ಯ ಲೋಕ ಸಭಾ ಸದಸ್ಯರಾದ ಶ್ರೀ ರಾಧಾಕೃಷ್ಣ ದೊಡ್ಡಮನಿ ಇವರು ಈ ಕಾರ್ಯಕ್ರಮದ ಉದ್ಘಾಟನೆ ಮಾಡಲಿದ್ದಾರೆ. ಸ್ಮರಣ ಸಂಚಿಕೆ ಮತ್ತು ಪುಸ್ತಕ ಬಿಡುಗಡೆ ಈ ಸಮಾರಂಭ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಸಾಧಕರನ್ನು ಸನ್ಮಾನಿಸಲಾಗುವುದು. ಮಧ್ಯಾಹ್ನ 1-30ರಿಂದ ಗಮಕ ಕಾರ್ಯಕ್ರಮ ನಡೆಯಲಿದ್ದು, ಗಮಕ 1ರಲ್ಲಿ ‘ಕುಮಾರವ್ಯಾಸ ಭಾರತ ಪಾಶುಪತಾಸ್ತ್ರ ಪ್ರದಾನ’ ಇದರ ವಾಚನ ವಿದ್ವಾನ್ ಗಣೇಶ ಉಡುಪ ಹಾಗೂ ವ್ಯಾಖ್ಯಾನ ವಿದ್ವಾನ್ ವಿನಾಯಕ ಎಂ.ಎನ್., ಗಮಕ 2ರಲ್ಲಿ ಹಾಸನದ ವಿದ್ವಾನ್ ಜಿ.ಎಸ್. ನಟೇಶ ಇವರಿಂದ ‘ಮಂಕುತಿಮ್ಮನ ಕಗ್ಗ’ ಉಪನ್ಯಾಸ, ಗಮಕ 3ರಲ್ಲಿ ‘ಚಾಮರಸನ ಪ್ರಭು ಲಿಂಗ ಲೀಲೆ ಅಕ್ಕ ಮಹಾದೇವಿಯ ಪ್ರಸಂಗ’ ವಾಚನ ವಿದುಷಿ ಶುಭಾ ರಾಘವೇಂದ್ರ ಹಾಗೂ ವ್ಯಾಖ್ಯಾನ ವಿದುಷಿ ಡಾ. ಜ್ಯೋತಿ ಶಂಕರ ಮೈಸೂರು, ಸಂಜೆ 6-30 ಗಂಟೆಗೆ ವಿದುಷಿ ಸೌಮ್ಯಶ್ರೀ ಶ್ರೀಕಂಠ ಇವರ ನೇತೃತ್ವದಲ್ಲಿ ಕುಮಾರವ್ಯಾಸ ಭಾರತ ಆಧಾರಿತ ಕಾವ್ಯ ನೃತ್ಯ – ‘ಉತ್ತರನ ಪೌರುಷ’ ನೃತ್ಯ ರೂಪಕವನ್ನು ತಿಪಟೂರಿನ ಶ್ರೀ ನೃತ್ಯ ಶಾಲೆಯವರು ಪ್ರಸ್ತುತ ಪಡಿಸಲಿದ್ದಾರೆ.
ದಿನಾಂಕ 22 ಸೆಪ್ಟೆಂಬರ್ 2024ರಂದು ಬೆಳಗ್ಗೆ 10-00 ಗಂಟೆಗೆ ಗಮಕ 4ರಲ್ಲಿ ಪಠ್ಯಾಧಾರಿತ ಗಮಕ ಪ್ರತ್ಯಕ್ಷಿಕೆ, ಗಮಕ 5ರಲ್ಲಿ ‘ರನ್ನನ ಗದಾಯುದ್ಧ’ ವಾಚನ : ಪ್ರೊ. ನಿರ್ಮಲಾ ಪ್ರಸನ್ನ ಹಾಗೂ ವ್ಯಾಖ್ಯಾನ : ಡಾ. ಎ.ವಿ. ಪ್ರಸನ್ನ ಬೆಂಗಳೂರು, ಗಮಕ 6ರಲ್ಲಿ ‘ಹರಿಶ್ಚಂದ್ರ ಕಾವ್ಯ ಪರಮೇಶ್ವರ ಸಾಕ್ಷ್ಯಾತ್ಕಾರ’ ವಾಚನ : ವಿದುಷಿ ಶ್ರೀ ಮಹಿಮಾ ಶ್ರೀವತ್ಸ ಹಾಗೂ ವ್ಯಾಖ್ಯಾನ : ವಿದುಷಿ ಡಾ. ಜ್ಯೋತಿ ಶಂಕರ ಮೈಸೂರು. ಸಂಜೆ 5-00 ಗಂಟೆಗೆ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.