ಬೆಂಗಳೂರು : ಬೆಂಗಳೂರಿನ ‘ಸ್ಟೇಜ್ ಬೆಂಗಳೂರು’ ಆಯೋಜನೆಯಲ್ಲಿ ‘ರಂಗಚಕ್ರ’ ತಂಡವು ಅಭಿನಯಿಸುತ್ತಿರುವ ಹಾಸ್ಯ ಭರಿತ ನಾಟಕ ‘ಅಪರಾಧಿ ನಾನಲ್ಲ’ ಇದರ ಪ್ರದರ್ಶನವು 05 ಅಕ್ಟೋಬರ್ 2024ರಂದು ಬೆಂಗಳೂರಿನ ವ್ಯೋಮ ಆರ್ಟ್ ಸ್ಪೇಸ್ ಆ್ಯಂಡ್ ಸ್ಟುಡಿಯೋ ಥಿಯೇಟರ್ ಇಲ್ಲಿ ನಡೆಯಲಿದೆ.
ಅಪರಾಧಿ ನಾನಲ್ಲ : ಜೈಲಿನಲ್ಲಿ ಇರುವ ಖೈದಿಗಳೆಲ್ಲ ಅಪರಾಧ ಮಾಡಿದವರಲ್ಲ ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುವ ಉಧಾಹರಣೆಗಳೂ ಇವೆ. ಶೂಟಿಂಗ್ ನೆಪದಲ್ಲಿ ಹಿರಿಯ ಅಧಿಕಾರಿಗಳ ತಂಡ ಜೈಲಿಗೆ ಭೇಟಿ ಕೊಡುತ್ತಾರೆ. ಖೈದಿಗಳು ತಮ್ಮ ಜೀವನದಲ್ಲಿ ಆದ ತಪ್ಪುಗಳನ್ನು ಫ್ಲಾಷ್ ಬ್ಯಾಕ್ ಹೇಳಿಕೊಳ್ಳುತ್ತಾರೆ. ಆ ಖೈದಿಗಳಲ್ಲಿ ದೊಡ್ಡಮಾದ ಎಂಬ ನಿರಪರಾಧಿಯನ್ನು ಪತ್ತೆ ಹಚ್ಚಿ. ಅವನನ್ನು ಬಿಡುಗಡೆ ಮಾಡಲು ಈ ತಂಡ ಶಿಫಾರಸ್ಸು ಮಾಡುತ್ತದೆ. ಹಾಸ್ಯಕ್ಕೆ ಹೇರಳವಾದ ಅವಕಾಶ ಈ ನಾಟಕದಲ್ಲಿ ಇದೆ. ಎಂ. ಎಸ್. ನರಸಿಂಹ ಮೂರ್ತಿ ರಚಿಸಿರುವ ಈ ನಾಟಕದ ವಿನ್ಯಾಸ ಮತ್ತು ನಿರ್ದೇಶನ ಮಹೇಶ್ ಕುಮಾರ್ ಅವರದ್ದು.

