ಬೆಂಗಳೂರು: ಕರ್ನಾಟಕ ಲಲಿತಕಲಾ ಅಕಾಡೆಮಿ ಕೊಡಮಾಡುವ ವಾರ್ಷಿಕ ಪುಸ್ತಕ ಬಹುಮಾನಕ್ಕಾಗಿ ಪುಸ್ತಕಗಳನ್ನು ಆಹ್ವಾನಿಸಿದೆ.
ಅಕಾಡೆಮಿಯು ಪ್ರತಿ ವರ್ಷ ಆಯಾ ವರ್ಷ ಪ್ರಕಟಗೊಂಡ ದೃಶ್ಯಕಲೆಗೆ ಸಂಬಂಧಿಸಿದ ಅತ್ಯುತ್ತಮ ಪುಸ್ತಕಗಳಿಗೆ ಬಹುಮಾನ ನೀಡುತ್ತಿದ್ದು 2024-25ನೇ ಸಾಲಿನ ಬಹುಮಾನಕ್ಕಾಗಿ ಇದೀಗ ಕೃತಿಗಳನ್ನು ಆಹ್ವಾನಿಸಲಾಗಿದೆ.
1 ಜನವರಿ 2023ರಿಂದ 31 ಡಿಸೆಂಬರ್ 2023ರ ಒಳಗಿನ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡ ಪುಸ್ತಕಗಳು ಬಹುಮಾನಕ್ಕೆ ಅರ್ಹವಾಗಿದ್ದು, ಆಯ್ಕೆಗೊಂಡ ಪುಸ್ತಕಕ್ಕೆ ರೂಪಾಯಿ 25 ಸಾವಿರ ನಗದು ಬಹುಮಾನ ದೊರೆಯಲಿದೆ. ಪುಸ್ತಕವು ಯಾವುದೇ ತರಗತಿ ಇಲ್ಲವೆ ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿರಬಾರದು, ಲೇಖಕರ ಸ್ವಂತ ರಚನೆಯಾಗಿರಬೇಕು, ಸಂಪಾದಿತ ಕೃತಿಯಾಗಿರಬಾರದು, ಪಿ. ಎಚ್. ಡಿ. ಹಾಗೂ ಡಿ. ಲಿಟ್ ಮತ್ತಿತರ ಅಧ್ಯಯನಕ್ಕಾಗಿ ಬರೆದ ಪುಸ್ತಕವಾಗಿರಬಾರದು ಎಂಬುದು ಸೇರಿದಂತೆ ಹಲವು ನಿಬಂಧನೆಗಳನ್ನು ವಿಧಿಸಲಾಗಿದೆ.
ಲೇಖಕರು ಪುಸ್ತಕದ ನಾಲ್ಕು ಪ್ರತಿಗಳನ್ನು ಬಹುಮಾನಕ್ಕಾಗಿ ಅರ್ಜಿಯೊಂದಿಗೆ ಸಲ್ಲಿಸಬೇಕು. ಪುಸ್ತಕಗಳು 30 ಅಕ್ಟೋಬರ್ 2024ರ ಒಳಗಾಗಿ ತಲುಪಬೇಕು. ಪುಸ್ತಕವನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ. ಸಿ. ರಸ್ತೆ, ಬೆಂಗಳೂರು-560002. ಈ ವಿಳಾಸಕ್ಕೆ ಅಂಚೆಯ ಮೂಲಕ ಅಥವಾ ಖುದ್ದು ತಲುಪಿಸಬೇಕಿದ್ದು ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ – [email protected] ಅಥವಾ 080 2248 0297 ಈ ಸಂಖ್ಯೆಯನ್ನು ಸಂಪರ್ಕಿಸಬಹುದು.
Subscribe to Updates
Get the latest creative news from FooBar about art, design and business.
Related Posts
Comments are closed.