ಕಾರ್ಕಳ : ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಜಂಟಿಯಾಗಿ ಅರ್ಪಿಸುವ ಕಾರ್ಯಕ್ರಮ -33 ಉಪನಿಷದ್ ವರ್ಷದ ಪ್ರಯುಕ್ತ ‘ತಿಂಗಳ ಉಪನ್ಯಾಸ ಮಾಲೆ’ಯು ದಿನಾಂಕ 28 ಸೆಪ್ಟೆಂಬರ್ 2024ರಂದು ಸಂಜೆ 5-00 ಗಂಟೆಗೆ ಕಾರ್ಕಳ ಹೊಟೇಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಡಾ. ಕಾರ್ತಿಕ್ ವಾಗೈ ಪಂಚನಬೆಟ್ಟು ಇವರು ಮಾಂಡುಕ್ಯ ಉಪನಿಷದ್ ಕುರಿತು ಉಪನ್ಯಾಸ ನೀಡಲಿರುವರು.
ಡಾ. ಕಾರ್ತಿಕ್ ವಾಗ್ಳೆ :
ಡಾ. ಕಾರ್ತಿಕ್ ವಾಗ್ಳೆಯವರು ಮೂಲತಃ ಉಡುಪಿಯ ಹಿರಿಯಡ್ಕ ಸಮೀಪದ ಪಂಚನಬೆಟ್ಟಿನವರು. ಪ್ರಬೋಧಿನೀ ಗುರುಕುಲ ಮತ್ತು ವೇದವಿಜ್ಞಾನ ಗುರುಕುಲಗಳಲ್ಲಿ 12 ವರ್ಷಗಳ ಕಾಲ ವೇದ (ಕೃಷ್ಣಯಜುರ್ವೇದ ಮೂಲಾಂತ) ವೇದಾಂತ (ಪ್ರಸ್ಥಾನತ್ರಯ – ಶಾಂಕರ ಭಾಷ್ಯ ಸಹಿತ) ಯೋಗಗಳ ಅಧ್ಯಯನ ನಡೆಸಿರುತ್ತಾರೆ. ಯೋಗ ಮತ್ತು ಸಾಹಿತ್ಯ (ಸ್ವರ್ಣ ಪದಕ ಸಹಿತ) ಸ್ನಾತಕೋತ್ತರ ಪದವಿಯನ್ನು ಪಡೆದು “ಪ್ರಾಚೀನ ಭಾರತೀಯ ಆಡಳಿತ ವ್ಯವಸ್ಥೆಯ ಪ್ರಸ್ತುತ ಕಾಲದ ಆಡಳಿತದಲ್ಲಿ ಅನ್ವಯ” ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ವಿದ್ಯಾವಾರಿಧಿ (ಪಿ.ಎಚ್.ಡಿ) ಪದವಿಯನ್ನು ಗಳಿಸಿಕೊಂಡಿದ್ದಾರೆ. ಪ್ರಬೋಧಿನಿ ಗುರುಕುಲದಲ್ಲಿ ಕಳೆದ 14 ವರ್ಷಗಳಿಂದ ಅಧ್ಯಾಪನವನ್ನು ನಡೆಸುತ್ತಿದ್ದು ಪ್ರಕೃತ ಅಲ್ಲೇ ಪ್ರಧಾನಾಚಾರ್ಯರಾಗಿದ್ದಾರೆ. ದೂರವಾಣಿ : 9482905410